ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಅವರು ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮೊದಲೇ ಡೆತ್‌ನೋಟ್ ಬರೆದಿಟ್ಟಿದ್ದು, ಅದು ಅವರ ಕಾರಿನಲ್ಲಿ ಸಿಕ್ಕಿದೆ.
IT ಅಧಿಕಾರಿಗಳು ಪರಮೇಶ್ವರ್ ಪಿಎ ರಮೇಶ್‌ಗೆ ಕಿರುಕುಳ ಕೊಟ್ಟರೇ? ಡೆತ್‌ನೋಟ್‌ನಲ್ಲಿ ಬರೆದಿದ್ದೇನು? - IT ride Latest news
ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಅವರು ತಮ್ಮ ಕಾರಿನಲ್ಲಿ ಡೆತ್ ನೋಟ್ ಬರೆದಿಟ್ಟಿದ್ದಾರೆ.
ರಮೇಶ್ ಡೆತ್‌ನೋಟ್‌ನಲ್ಲಿ ಐಟಿ ಅಧಿಕಾರಿಗಳ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ. ನನ್ನ ಮೇಲೆ ನಡೆದ ಐಟಿ ದಾಳಿಯಿಂದ ದಿಗ್ಬ್ರಮೆ ಉಂಟಾಗಿದೆ. ಮರ್ಯಾದೆಗೆ ಅಂಜಿ ಈ ರೀತಿ ಮಾಡುತ್ತಿದ್ದೇನೆ. ಐಟಿ ಅಧಿಕಾರಿಗಳೇ ನನ್ನ ಹೆಂಡತಿ ಮಕ್ಕಳಿಗೆ ತೋಂದರೆಯನ್ನ ಕೊಡಬೇಡಿ ಎಂಬುದು ಪತ್ರದಲ್ಲಿದೆ.
ಸೌಮ್ಯಾ ದಯವಿಟ್ಟು ನನ್ನ ಕ್ಷಮಿಸು. ಮಕ್ಕಳಿಗೆ ಒಳ್ಳೆಯ ವಿಧ್ಯಾಭ್ಯಾಸ ಕೊಟ್ಟು ಅವರ ಜೀವನ ಉತ್ತಮವಾಗಿ ರೂಪಿಸು ಎಂದು ಹೆಂಡತಿಗೆ ಧೈರ್ಯ ಹೇಳಿದ್ದಾರೆ. ಹಾಗೆಯೇ ಲಕ್ಷಿದೇವಿ, ಪದ್ಮಾ, ಸತೀಶ್ ನಿಮ್ಮೊಂದಿಗೆ ಹುಟ್ಟಿದ್ದು, ನಿಮಗೆ ಸಹಾಯ ಮಾಡಬೇಕಾಗಿರುವುದು ನನ್ನ ಕರ್ತವ್ಯ. ಆದರೆ, ಅದು ಸಾಧ್ಯವಾಗುತ್ತಿಲ್ಲ. ನನ್ನ ಕ್ಷಮಿಸಿ ಎಂದು ಪತ್ರದಲ್ಲಿ ಬರೆದಿದ್ದಾರೆ.