ಕರ್ನಾಟಕ

karnataka

ETV Bharat / city

‘ಈ ಆಸ್ತಿ ನಮ್ಮ ತಂದೆ ಮಾಡಿದ್ದು... ಅದು ಬಿಟ್ರೆ ನಾವೇನೂ ಮಾಡಿಲ್ಲ’: ಜಿ ಪರಮೇಶ್ವರ್​ - Parameshwar

ಐಟಿ ಅಧಿಕಾರಿಗಳ ಜೊತೆಗೆ ಮಾಜಿ ಡಿಸಿಎಂ ಪರಮೇಶ್ವರ್ ಬೆಂಗಳೂರಿಗೆ ಆಗಮಿಸಿದ್ದು, ಐಟಿ ದಾಳಿ ಬಳಿಕ ಮೊದಲ ಬಾರಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪರಮೇಶ್ವರ್

By

Published : Oct 10, 2019, 12:48 PM IST

Updated : Oct 10, 2019, 1:19 PM IST

ಬೆಂಗಳೂರು:ಮಾಜಿ ಡಿಸಿಎಂ ಪರಮೇಶ್ವರ್ ಮನೆ ಹಾಗೂ ಶಿಕ್ಷಣ ಸಂಸ್ಥೆಗಳ‌ ಮೇಲೆ ಐಟಿ ದಾಳಿಯಾಗಿದ್ದು, ಹೀಗಾಗಿ ಐಟಿ ಅಧಿಕಾರಿಗಳ ಸೂಚನೆ ಮೇರೆಗೆ ಪರಮೇಶ್ವರ್ ಅವರು ತುಮಕೂರಿನಿಂದ ಐಟಿ ಅಧಿಕಾರಿಗಳ ಜೊತೆಗೆ ಸದಾಶಿವನಗರ ನಿವಾಸಕ್ಕೆ ಆಗಮಿಸಿದ್ದಾರೆ.

ಐಟಿ ಅಧಿಕಾರಿಗಳೊಂದಿಗೆ ಬೆಂಗಳೂರಿಗೆ ಬಂದ ಪರಮೇಶ್ವರ್

ಈ ಸಂದರ್ಭ ಐಟಿ ದಾಳಿ ಬಳಿಕ ಮೊದಲ ಬಾರಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ನನಗೆ ಯಾವುದೂ ಗೊತ್ತಿಲ್ಲ. ನಾನು ನನ್ನ ಕ್ಷೇತ್ರದಲ್ಲಿದ್ದೆ, ಐಟಿ ಅಧಿಕಾರಿಗಳು ಬರೋಕೆ ಹೇಳಿದ್ರು ಬಂದಿದ್ದೇನೆ. ಏನು ಪ್ರಶ್ನೆ ಕೇಳುತ್ತಾರೊ ಅದಕ್ಕೆ ಉತ್ತರಿಸುವೆ ಎಂದರು.

ಕಾಲೇಜು, ನಿವಾಸ, ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ನಾವೆಲ್ಲ 58 ವರ್ಷದಿಂದ ಸಂಸ್ಥೆ ನಡೆಸುತ್ತಾ ಇದ್ದೇವೆ. ಪ್ರತಿಯೊಂದು ಐಟಿ ರಿಟರ್ನ್ಸ್ ಮಾಡಿದ್ದೇನೆ. ನಮ್ಮ ಶಿಕ್ಷಣ ಸಂಸ್ಥೆಯನ್ನ ನಮ್ಮ ತಂದೆಯವರು ಮಾಡಿದ್ದು ಬಿಟ್ಟರೆ, ನಮ್ಮದು ಯಾವ ಬ್ಯುಸಿನೆಸ್​​ ಕೂಡ ಇಲ್ಲ ಎಂದ ಅವರು, ರಾಜಕೀಯ ಪ್ರೇರಿತ ದಾಳಿಯೇ ಎಂಬ ಪ್ರಶ್ನೆಗೆ ಉತ್ತರ ನೀಡದೇ ತೆರಳಿದರು.

Last Updated : Oct 10, 2019, 1:19 PM IST

ABOUT THE AUTHOR

...view details