ಬೆಂಗಳೂರು: ಇನ್ಫಿನಿಟಿ 2020 ನಿಧಿ ಸಂಗ್ರಹಣೆಗಾಗಿ ಆಯೋಜಿಸಿದ್ದ ಪ್ಯಾರಾ ಸೈಕ್ಲಿಂಗ್ ಯಾತ್ರೆಗೆ ಸಿಎಂ ಇಂದು ಚಾಲನೆ ನೀಡಿದರು.
ಪ್ಯಾರ ಸೈಕ್ಲಿಂಗ್ ಯಾತ್ರೆಗೆ ಸಿಎಂ ಚಾಲನೆ ವಿಧಾನಸೌಧದ ಪೂರ್ವ ಭಾಗದಲ್ಲಿ ಸೈಕಲ್ ಯಾತ್ರೆಗೆ ಸಿಎಂ ಬಿ.ಎಸ್. ಯಡಿಯೂರಪ್ಪನವರು ಚಾಲನೆ ನೀಡಿದರು. ಆದಿತ್ಯ ಮೆಹ್ತಾ ಫೌಂಡೇಶನ್ ಮತ್ತು ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಸಹಯೋಗದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಈ ಯಾತ್ರೆ ನಡೆಯುತ್ತಿದೆ. 30 ಮಂದಿ ವಿಶೇಷ ಚೇತನರ ತಂಡ ಈ ಸೈಕ್ಲಿಂಗ್ ಯಾತ್ರೆ ನಡೆಸಲಿದ್ದಾರೆ.
ವಿಶೇಷ ಚೇತನ ಪ್ರತಿಭೆಗಳನ್ನು ಉತ್ತೇಜಿಸುವ ಸಂಬಂಧ ನಿಧಿ ಸಂಗ್ರಹಕ್ಕೆ ಮುಂದಾಗಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಡೆಯಲಿರುವ ಈ ಯಾತ್ರೆ 43 ದಿನ 35 ನಗರಗಳಲ್ಲಿ ಸಂಚರಿಸಲಿದ್ದು, ಡಿ.31ಕ್ಕೆ ಕನ್ಯಾಕುಮಾರಿಯಲ್ಲಿ ಸಮಾಪ್ತಿಗೊಳ್ಳಲಿದೆ.
ಬಳಿಕ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಪ್ಯಾರಾ ಸೈಕ್ಲಿಂಗ್ ಯಾತ್ರೆಗೆ ಸಂತೋಷದಿಂದ ಚಾಲನೆ ನೀಡಿದ್ದೇನೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಯಾತ್ರೆ ಮಾಡ್ತಿದ್ದಾರೆ. ಇದು ಶ್ಲಾಘನೀಯ. ವಿಶೇಷ ಚೇತನರು ನಾವು ಯಾರಿಗೂ ಕಡಿಮೆ ಇಲ್ಲ ಅನ್ನೋ ಸಂದೇಶ ರವಾನೆ ಮಾಡುತ್ತಿದ್ದಾರೆ. ಗಡಿಯಲ್ಲಿ ದೇಶ ಕಾಯುವ ಯೋಧರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಇದು ಮೆಚ್ಚುವಂತ ವಿಚಾರ. ಈ ಯಾತ್ರೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.