ಕರ್ನಾಟಕ

karnataka

ETV Bharat / city

ಎಂಟನೇ ದಿನಕ್ಕೆ ಕಾಲಿಟ್ಟ ಪಂಚಮಸಾಲಿ ಸತ್ಯಾಗ್ರಹ : ಧರಣಿಯ ದಣಿವಾರಿಸುತ್ತಿರುವ ಭಜನೆ, ಸಂಗೀತ - ಎಂಟನೇ ದಿನಕ್ಕೆ ಕಾಲಿಟ್ಟ ಪಂಚಮಸಾಲಿ ಸತ್ಯಾಗ್ರಹ

ಫ್ರೀಡಂ ಪಾರ್ಕ್​ನಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಬರೀ ಘೋಷಣೆಗಳಿಗೆ ಸೀಮಿತವಾಗದೆ ಭಜನೆ, ಸಂಗೀತದೊಂದಿಗೆ ಮುಂದುವರೆಯುತ್ತಿದೆ. ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಕೊಪ್ಪಳದ ಕಲಾವಿದರು ಶ್ರೀಗಳ ಅಪೇಕ್ಷೆ ಮೇರೆಗೆ ಫ್ರೀಡಂ ಪಾರ್ಕ್ ಗೆ ಆಗಮಿಸಿ ಇಡೀ ದಿನ ಸಂಗೀತ, ಭಜನೆ ಮೂಲಕ ಧರಣಿಯ ದಣಿವು ಕಾಣದಂತೆ ಮಾಡಿದ್ದಾರೆ.

panchamasali-satyagraha-step-into-8th-day
ಪಂಚಮಸಾಲಿ ಸತ್ಯಾಗ್ರಹ

By

Published : Feb 28, 2021, 4:23 PM IST

ಬೆಂಗಳೂರು: ಪಂಚಮಸಾಲಿ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸುವಂತೆ ಒತ್ತಾಯಿಸಿ ಕೂಡಲ ಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಮೀಸಲಾತಿ ಕುರಿತು ಸರ್ಕಾರದಿಂದ ಸ್ಪಷ್ಟ ಭರವಸೆ ಇಲ್ಲದೇ ಧರಣಿ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಶ್ರೀಗಳು ಪ್ರಕಟಿಸಿದ್ದಾರೆ.

ಕೂಡಲಸಂಗಮದಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಿದ್ದ ಬಸವ ಜಯಮೃತ್ಯುಂಜಯ ಶ್ರೀಗಳು ಕಳೆದ ಎಂಟು ದಿನದಿಂದ ನಗರದ ಫ್ರೀಡಂ ಪಾರ್ಕ್​ನಲ್ಲಿ ಧರಣಿ ನಡೆಸುತ್ತಿದ್ದಾರೆ. ಸಮುದಾಯದ ಮುಖಂಡರೊಂದಿಗೆ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಎಂಟನೇ ದಿನಕ್ಕೆ ಕಾಲಿಟ್ಟ ಪಂಚಮಸಾಲಿ ಸತ್ಯಾಗ್ರಹ
ಸರ್ಕಾರಕ್ಕೆ ಮಾರ್ಚ್ 4 ರವರೆಗೆ ಗಡುವು ವಿಧಿಸಿದ್ದು, ಅಂದು ಸಂಜೆ 4 ಗಂಟೆಯೊಳಗೆ ಸರ್ಕಾರ ಮೀಸಲಾತಿ ಘೋಷಣೆ ಮಾಡದೇ ಇದ್ದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸಂಗೀತದೊಂದಿಗೆ‌ ಧರಣಿ: ಇನ್ನು ಫ್ರೀಡಂ ಪಾರ್ಕ್​ನಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಬರೀ ಘೋಷಣೆಗಳಿಗೆ ಸೀಮಿತವಾಗದೆ ಭಜನೆ, ಸಂಗೀತದೊಂದಿಗೆ ನಡೆಯುತ್ತಿದೆ. ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಕೊಪ್ಪಳದ ಕಲಾವಿದರು ಶ್ರೀಗಳ ಅಪೇಕ್ಷೆ ಮೇರೆಗೆ ಫ್ರೀಡಂ ಪಾರ್ಕ್​ಗೆ ಆಗಮಿಸಿ ಇಡೀ ದಿನ ಸಂಗೀತ, ಭಜನೆ ಮೂಲಕ ಧರಣಿಯ ದಣಿವು ಕಾಣದಂತೆ ಮಾಡಿದ್ದಾರೆ. ಇದಕ್ಕೆ ಬಸವ ಜಯಮೃತ್ಯುಂಜಯ ಶ್ರೀಗಳು ಸಂತಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details