ಬೆಂಗಳೂರು:ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕುರಿ ಬಲಿ ಕೊಡುವ ಮೂಲಕ ಸುದೀಪ್ ಕಟೌಟ್ಗೆ ರಕ್ತಾರ್ಪಣೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
'ಪೈಲ್ವಾನ್' ಸಿನಿಮಾ ಬಿಡುಗಡೆಗೆ ಕುರಿ ಬಲಿ; ಪ್ರಾಣಿಪ್ರಿಯರ ತೀವ್ರ ವಿರೋಧ - ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಬಿಡುಗಡೆಯಾಗಿದ್ದು, ಅಭಿಮಾನಿಗಳು ಚಳ್ಳಕೆರೆ ಪಟ್ಟಣದ ಪದ್ಮಾ ಚಿತ್ರಮಂದಿರದ ಆವರಣದಲ್ಲಿ ಕುರಿ ಬಲಿ ಕೊಡುವ ಮೂಲಕ ಸುದೀಪ್ ಕಟೌಟ್ಗೆ ರಕ್ತಾರ್ಪಣೆ ಮಾಡಿದ್ದಾರೆ. ಇದು ಪ್ರಾಣಿಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ.
ಪೈಲ್ವಾನ್ ಸಿನಿಮಾ ಬಿಡುಗಡೆಗೆ ಕುರಿ ಬಲಿ; ಪ್ರಾಣಿ ಪ್ರಿಯರಿಂದ ವಿರೋಧ ವ್ಯಕ್ತ
ಜಿಲ್ಲೆಯ ಚಳ್ಳಕೆರೆ ಪಟ್ಟಣದ ಪದ್ಮಾ ಚಿತ್ರಮಂದಿರದ ಆವರಣದಲ್ಲಿ ಪ್ರಾಣಿ ಬಲಿ ಕೊಡಲಾಗಿದೆ. ನಟನ ಮೇಲಿರುವ ಅಭಿಮಾನಕ್ಕೆ ಮೂಕ ಪ್ರಾಣಿ ಬಲಿಕೊಟ್ಟು ಕಿಚ್ಚನ ಅಭಿಮಾನಿಗಳು ವಿಕೃತಿ ಮೆರೆದಿದ್ದಾರೆ.
ಅಭಿಮಾನದ ಅತಿರೇಕಕ್ಕೆ ಪ್ರಜ್ಞಾವಂತರು ಹಾಗೂ ಪ್ರಾಣಿಪ್ರಿಯರು ವಿರೋಧ ವ್ಯಕ್ತಪಡಿಸಿದ್ದಾರೆ.