ಕರ್ನಾಟಕ

karnataka

ETV Bharat / city

ಪೊಲೀಸರ ರೂಲ್ಸ್​ಗೆ ಪಾದರಾಯನಪುರ ಜನರು ಡೋಂಟ್​ ಕೇರ್​..! - ಸೆಕ್ಷನ್​ 144

ಕೊರೊನಾ ಸೋಂಕು ಹರಡುವುದನ್ನು ತಡೆಯಲು ಪಾದರಾಯನಪುರವನ್ನು ಅತಿ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದ್ದು, ಅನೇಕ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಇಲ್ಲಿನ ಜನತೆ ಪೊಲೀಸರ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

padarayanapura
ಪಾದರಾಯನಪುರ

By

Published : Jun 15, 2020, 2:02 PM IST

ಬೆಂಗಳೂರು:ಪಾದರಾಯನಪುರದಲ್ಲಿ ಪೊಲೀಸರು ಎಷ್ಟೇ ಕಠಿಣ ಕ್ರಮಗಳನ್ನು ವಿಧಿಸಿದರೂ ಜನ ಮಾತ್ರ ಪೊಲೀಸರ ನಿಯಮಗಳಿಗೆ ಡೋಂಟ್ ಕೇರ್ ಅಂತಿದ್ದಾರೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕೇಸ್ ಅಟ್ಟಹಾಸ ಜಾಸ್ತಿಯಾಗುತ್ತಿದೆ. ಹೀಗಾಗಿ ಕಂಟೇನ್​​​ಮೆಂಟ್​​ ಝೋನ್​​​ಗಳಲ್ಲಿ ಬಹಳಷ್ಟು ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆ, ಬಿಬಿಎಂಪಿ ಹಾಗೂ ಪೊಲೀಸರು ಕೈಗೊಳ್ಳುತ್ತಿದ್ದಾರೆ.

ಪಾದರಾಯನಪುರದಲ್ಲಿ ರೂಲ್ಸ್​​ಗಳಿಗೆ ಇಲ್ಲ ಬೆಲೆ

ಅತಿಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾದ ಪಾದರಾಯನಪುರದಲ್ಲಿ ಇನ್ನೂ ಎಚ್ಚೆತ್ತುಕೊಳ್ಳದ ಜನರು ಅಗತ್ಯ ವಸ್ತುಗಳ ನೆಪದಲ್ಲಿ ಮಾಸ್ಕ್ ಹಾಕದೇ, ದೈಹಿಕ ಅಂತರವಿಲ್ಲದೇ ಆಟೋಗಳಲ್ಲಿ, ಬೈಕ್ ಗಳಲ್ಲಿ ಓಡಾಡ್ತಿದ್ದಾರೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದರೂ ಪಾದರಾಯನಪುರದ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಪಾದರಾಯನಪುರ ಬಳಿ ಭದ್ರತೆಗೆ ತೆರಳಿದ ಹೆಡ್ ಕಾನ್ಸ್​​ಟೇಬಲ್​ಗೆ ಮಾತ್ರವಲ್ಲದೇ, ಕಾರ್ಪೊರೇಟರ್​​​​ ಇಮ್ರಾನ್ ಪಾಷಾಗೂ ಈಗಾಗಲೇ ಕೊರೊನಾ ದೃಢಪಟ್ಟಿತ್ತು. ಇಮ್ರಾನ್ ಪಾಷಾ ಆಸ್ಪತ್ರೆಯಿಂದ ಬಿಡುಗಡೆಯಾದ ಸಂದರ್ಭದಲ್ಲಿ ಜನ ಗುಂಪಾಗಿ ಸೇರಿ ನಿಯಮ ಉಲ್ಲಂಘನೆ ಮಾಡಿದ ಕಾರಣ ಪಾದರಾಯನಪುರದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಇಷ್ಟಿದ್ದರೂ ಕೂಡಾ ಜನರ ಓಡಾಟ ನಿಂತಿಲ್ಲ.

ABOUT THE AUTHOR

...view details