ಬೆಂಗಳೂರು: ನಗರದ ಕಂಟೇನ್ಮೆಂಟ್ ಝೋನ್ ಆಗಿರುವ ಪಾದರಾಯನಪುರದಲ್ಲಿ ಇಂದು ಮತ್ತೆ ಐದು ಜನರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ರೋಗಿ ಸಂಖ್ಯೆ 554 ಹಾಗೂ 555ರ ಸಂಪರ್ಕದಿಂದ ಕೊರೊನಾ ಸೋಂಕು ಹರಡಿದೆ. ಇದರಲ್ಲಿ ಮೂವರು ಮಕ್ಕಳು, ಇಬ್ಬರು ವಯಸ್ಕರರು ಸೇರಿದ್ದಾರೆ.
ಪತಿ, ಪತ್ನಿ ಹಾಗೂ ಮೂವರಿಗೆ ಸೋಂಕು, ಪಾದರಾಯನಪುರದಲ್ಲಿ ಆತಂಕ - ಪಾದರಾಯನಪುರದಲ್ಲಿ ಕೊರೊನಾ
ಬೆಂಗಳೂರಿನ ಕೊರೊನಾ ಹಾಟ್ಸ್ಪಾಟ್ ಆಗಿರುವ ಪಾದರಾಯನಪುರದಲ್ಲಿ ಇಂದು ಐವರಿಗೆ ಕೊರೊನಾ ಪತ್ತೆಯಾಗಿದೆ. ಇದರಲ್ಲಿ ಮೂವರು ಮಕ್ಕಳು, ಇಬ್ಬರು ವಯಸ್ಕರು ಸೇರಿದ್ದಾರೆ.
ಪಾದರಾಯನಪುರ
ಸೋಂಕಿತರಲ್ಲಿ ಒಂದೇ ಕಟ್ಟಡದಲ್ಲಿ ವಾಸವಾಗಿದ್ದ ಮೂರು ಕುಟುಂಬದ ಸದಸ್ಯರಿದ್ದಾರೆ. ಈ ಹಿಂದೆ ಪಾದರಾಯನಪುರದಲ್ಲಿ ಸಾಮೂಹಿಕ ಸೋಂಕು ಪರೀಕ್ಷೆ ನಡೆಸಿದಾಗ ರೋಗಿ ಸಂಖ್ಯೆ 554 ಹಾಗೂ 555ರಲ್ಲಿ ಸೋಂಕು ದೃಢಪಟ್ಟಿತ್ತು. ಅವರ ಸಂಪರ್ಕದಿಂದ ಈಗ ಐವರಿಗೆ ಕೊರೊನಾ ಹಬ್ಬಿದೆ.
ಒಂದೇ ಕುಟುಂಬದ ಪತಿ, ಪತ್ನಿಗೆ, ಇನ್ನೊಂದು ಮನೆಯ ಇಬ್ಬರು ಗಂಡು ಮಕ್ಕಳು ಹಾಗೂ ಮತ್ತೊಂದು ಮನೆಯ ಹುಡುಗನಿಗೆ ಸೋಂಕು ದೃಢಪಟ್ಟಿದೆ. ಸೋಂಕು ಪತ್ತೆ ಪರೀಕ್ಷೆ ನಡೆಯೋದಕ್ಕೂ ಮೊದಲು ಕ್ವಾರಂಟೈನ್ನಲ್ಲಿದ್ದು, ಸೋಂಕು ಪತ್ತೆ ಪರೀಕ್ಷೆ ನಡೆಸಿದಾಗ ಕೊರೊನಾ ದೃಢಪಟ್ಟಿದೆ.