ಬೆಂಗಳೂರು: ಪಾದರಾಯನಪುರ ಬಳಿ ಬಿಬಿಎಂಪಿ ಹಾಗೂ ಆರೋಗ್ಯಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುತೇಕ ಆರೋಪಿಗಳನ್ನ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಘಟನೆ ನಡೆದು 8 ದಿನ ಕಳೆದರೂ ಮಾಸ್ಟರ್ ಮೈಂಡ್ ಇರ್ಫಾನ್ ಮಾತ್ರ ಇನ್ನೂ ಪತ್ತೆಯಾಗಿಲ್ಲ.
ಪಾದರಾಯನಪುರ ಪ್ರಕರಣ: ಹೈದರಾಬಾದ್ಗೆ ಎಸ್ಕೇಪ್ ಆದ್ನಾ ಮಾಸ್ಟರ್ ಮೈಂಡ್ ಇರ್ಫಾನ್? - Padarayanapura assault case
ಪಾದರಾಯನಪುರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಹುತೇಕ ಆರೋಪಿಗಳನ್ನ ಬಂಧಿಸಿದ್ದಾರೆ. ಆದರೆ ಪ್ರಕರಣದ ಮಾಸ್ಟರ್ ಮೈಂಡ್ ಇರ್ಫಾನ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇರ್ಫಾನ್ ಗಲಾಟೆ ಮಾಡಿಸಿ ಸ್ಥಳೀಯ ಜನರನ್ನು ರೊಚ್ಚಿಗೆಬಿಸಿ ಸ್ಥಳದಿಂದ ಕಾಲ್ಕಿತ್ತಿದ್ದ ಎನ್ನಲಾಗಿತ್ತು. ಸದ್ಯಕ್ಕೆ ಈ ಕುರಿತು ಸಿಸಿಬಿ ಹಾಗೂ ಪಶ್ಚಿಮ ವಿಭಾಗದ ಪೊಲೀಸರು ತನಿಖೆ ನಡೆಸಿದ್ದಾರೆ. ಪೊಲೀಸರಿಗೆ, ಆರೋಪಿ ಗಲಭೆ ನಡೆದ ನಂತರ ಹೈದರಾಬಾದ್ಗೆ ಎಸ್ಕೇಪ್ ಆಗಿರಬಹುದಾ ಅಥವಾ ಮೈಸೂರಿನಲ್ಲಿಯೇ ಇದ್ದಾನಾ ಎಂಬ ಶಂಕೆ ಮೇರೆಗೆ ಮೈಸೂರು ಮತ್ತು ಹೈದರಾಬಾದ್ ಭಾಗದಲ್ಲಿ ಇರ್ಫಾನ್ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಇನ್ನು ಆರೋಪಿ ಇರ್ಫಾನ್ ಓವೈಸಿ ಸಂಘಟನೆಯಲ್ಲಿ ಗುರಿತಿಸಿಕೊಂಡಿದ್ದ. ಹೀಗಾಗಿ ಈತನಿಗೆ ಸಂಂಘಟನೆಯವರು ಸಹಾಯ ಮಾಡಿರುವ ಗುಮಾನಿ ಕೂಡ ಇದೆ. ಈ ಹಿನ್ನೆಲೆ ಪೊಲೀಸರು ಓವೈಸಿ ಸಂಘಟನೆಯಲ್ಲಿದ್ದವರನ್ನು ವಿಚಾರಣೆ ನಡೆಸಿ ತನಿಖೆ ಮುಂದುವರೆಸಿದ್ದಾರೆ.