ಬೆಂಗಳೂರು: ಇತ್ತೀಚೆಗೆ ಸ್ಮಾರ್ಟ್ ಫೋನ್ಗಳಲ್ಲಿ ಆಮ್ಲಜನಕ ತಪಾಸಣೆ ಮಾಡುವ ಹಲವಾರು ಆ್ಯಪ್ಗಳು ಪ್ರಾರಂಭವಾಗಿದ್ದು, ಇದರಿಂದ ನಿಮ್ಮ ಬಯೋಮೆಟ್ರಿಕ್ ಹಾಗೂ ಇನ್ನಿತರ ಸೂಕ್ಷ್ಮ ಡೇಟಾ ಕಳ್ಳತನ ಆಗಬಹುದು ಎಂದು ಎಥಿಕಲ್ ಹ್ಯಾಕರ್ಸ್ ತಿಳಿಸಿದ್ದಾರೆ.
ಇತ್ತೀಚೆಗೆ ಕೆಲ ಆ್ಯಪ್ಗಳು ಪಿಪಿಜಿ ತಂತ್ರಜ್ಞಾನ ಬಳಸಿ ಕೇವಲ 40 ಸೆಕೆಂಡ್ನಲ್ಲಿ ದೇಹದಲ್ಲಿನ ಆಮ್ಲಜನಕ ಪ್ರಮಾಣ ತೋರಿಸುತ್ತವೆ. ಆದರೆ, ಎಥಿಕಲ್ ಹ್ಯಾಕರ್ ರಘೋತ್ತಮ ಹೇಳುವ ಪ್ರಕಾರ, ಡೇಟಾ ಕಳ್ಳತನಕ್ಕೆ ಇದು ಸುಲಭದ ದಾರಿ. ಈಗಿನ ಸ್ಮಾರ್ಟ್ ಫೋನ್ಗಳಲ್ಲಿ ಫಿಂಗರ್ ಪ್ರಿಂಟ್ ಮೂಲಕ ಗೂಗಲ್ ಪೇ, ಫೋನ್ ಪೇ ಸೇರಿದಂತೆ ಅನೇಕ ಯುಪಿಐ ಆ್ಯಪ್ಗಳ ಆಧಾರವಾಗಿದೆ. ಈಗ ನಮ್ಮ ಬೆರಳಚ್ಚು ನಂಬಿಕೆಗೆ ಅರ್ಹವಲ್ಲದ ಜನರಿಗೆ ಸಿಕ್ಕರೆ ಅಪಾಯ ಕಟ್ಟಿಟ್ಟ ಬುತ್ತಿ.
ಕೆಲ ಸ್ಟಾರ್ಟ್ ಅಪ್ಗಳು ಆಕ್ಸಿಮೀಟರ್ ಬೆಲೆ ಹೆಚ್ವಿರುವ ಹಿನ್ನೆಲೆಯಲ್ಲಿ ಉಚಿತವಾಗಿ ಆಮ್ಲಜನಕ ಪ್ರಮಾಣ ಕಂಡುಹಿಡಿಯಲು ಆ್ಯಪ್ಗಳನ್ನ ರೂಪಿಸಿವೆ. ಇದನ್ನ ನಾವು ಶಿಫಾರಸು ಮಾಡಲು ಸಾಧ್ಯವಿಲ್ಲ. ಆಸ್ಪತ್ರೆ ಅಥವಾ ಸರ್ಕಾರ ಈ ರೀತಿ ಆ್ಯಪ್ಗಳನ್ನ ಮಾಡಿದರೆ ನಂಬಿಕೆ ಇರುತ್ತದೆ. ಕುರುಡು ನಂಬಿಕೆಯಿಂದ ನಮ್ಮ ಸೂಕ್ಷ್ಮ ಡೇಟಾ ನೀಡುವುದು ಸರಿ ಅಲ್ಲ ಎಂಬುದು ಎಥಿಕಲ್ ಹ್ಯಾಕರ್ಸ್ ಅಭಿಪ್ರಾಯ.
ಸ್ಮಾರ್ಟ್ ಫೋನ್ ಫ್ಲ್ಯಾಶ್ ಲೈಟ್ ಹಾಗೂ ಕ್ಯಾಮರಾ ಬಳಸಿ ಆಮ್ಲಜನಕ ಪ್ರಮಾಣ ತಿಳಿಸುತ್ತದೆ. ಆಕ್ಸಿಮೀಟರ್ ಇನ್ಫ್ರಾ ರೆಡ್ ಲೈಟ್ ಬಳಸಿ ಆಕ್ಸಿಜನ್ ಪ್ರಮಾಣ ನೀಡುತ್ತದೆ. ಆದರೆ, ಕ್ಯಾಮರಾ ಮೂಲಕ ಬೆರಳಿನ ಅಚ್ಚು ಸರಿಯಾಗಿ ಕಂಡು ಬಂದು ಯುಪಿಐ ಹಾಗೂ ಫೋನ್ಗಳಿಗೆ ಬಳಕೆ ಮಾಡುವಂತಹ ಫಿಂಗರ್ ಪ್ರಿಂಟ್ ಸ್ಕ್ಯಾನರ್ನಿಂದ ಸೂಕ್ಷ್ಮ ಡೇಟಾ ಕಳ್ಳತನ ಆಗುವ ಸಂಭವಿದೆ ಎಂದು ರಘೋತ್ತಮ ತಿಳಿಸಿದ್ದಾರೆ.
ಓದಿ:ಜನರ ಹಸಿವು ನೀಗಿಸುತ್ತಿರುವ ನೀನಾಸಂ ಸತೀಶ್