ಬೆಂಗಳೂರು: ರಾಜ್ಯಾದ್ಯಂತ ಮೇ.5 ರಿಂದ 20ರವರೆಗೆ ನಡೆದ ಟ್ರಾನ್ಸ್‌ಫಾರ್ಮರ್ ನಿರ್ವಹಣಾ ಅಭಿಯಾನದಲ್ಲಿ ಒಟ್ಟು 2,03,438 ಟ್ರಾನ್ಸ್ಫಾರ್ಮರ್ಗಳನ್ನು ದುರಸ್ತಿ ಮಾಡಲಾಗಿದೆ. ಬೆಸ್ಕಾಂ ವ್ಯಾಪ್ತಿಯ- 10,794, ಸೆಸ್ಕಾಂ- 16,170, ಮೆಸ್ಕಾಂ- 73,012, ಜೆಸ್ಕಾಂ- 32,112, ಹೆಸ್ಕಾಂ- 71,350 ಟ್ರಾನ್ಸ್ಫಾರ್ಮರ್ಗಳನ್ನು ನಿರ್ವಹಣೆ ನಡೆದಿದೆ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಪ್ರಕಟಣೆ ಹೊರಡಿಸಿದ್ದಾರೆ.
ರಾಜ್ಯದೆಲ್ಲೆಡೆ 2 ಲಕ್ಷಕ್ಕೂ ಹೆಚ್ಚು ಟ್ರಾನ್ಸ್‌ಫಾರ್ಮರ್ ದುರಸ್ತಿ: ಸಚಿವ ಸುನೀಲ್ ಕುಮಾರ್ - Transformer Repair
ಮೇ.5 ರಿಂದ 20ರವರೆಗೆ ನಡೆದ ಟ್ರಾನ್ಸ್‌ಫಾರ್ಮರ್ ನಿರ್ವಹಣಾ ಅಭಿಯಾನದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಟ್ರಾನ್ಸ್ಫಾರ್ಮರ್ಗಳನ್ನು ದುರಸ್ತಿ ಮಾಡಲಾಗಿದೆ ಎಂದು ಇಂಧನ ಸಚಿವರು ಮಾಹಿತಿ ನೀಡಿದ್ದಾರೆ.
ಸಚಿವ ಸುನೀಲ್ ಕುಮಾರ್
ರಾಜ್ಯದಲ್ಲಿ ಹದಿನೈದು ವರ್ಷಕ್ಕಿಂತ ಹಳೆಯ ಟ್ರಾನ್ಸ್ಫಾರ್ಮರ್ಗಳು ಸಾಕಷ್ಟು ಪ್ರಮಾಣದಲ್ಲಿವೆ. ಮಳೆಗಾಲದಲ್ಲಿ ಸಿಡಿಲು ಬಡಿತ, ಅಧಿಕ ಲೋಡ್ನಿಂದ ತೊಂದರೆಯಾಗುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಅಗತ್ಯವಿದ್ದೆಡೆ ರಿಪೇರಿ ಕೆಲಸ ಮಾಡುವಂತೆ ಎಲ್ಲ ಹಂತದ ಅಧಿಕಾರಿಗಳಿಗೂ ಸೂಚನೆ ನೀಡಲಾಗಿತ್ತು ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ:ವಿಜಯನಗರ ಜಿಲ್ಲೆಗೆ ತಕ್ಷಣ ಅಧಿಕಾರಿಗಳನ್ನು ನೇಮಿಸಿ: ಸಿಎಂ ಸೂಚನೆ