ಕರ್ನಾಟಕ

karnataka

ETV Bharat / city

ಒಡಿಶಾದಿಂದ ಬಂದ ವಿಶೇಷಚೇತನ ಬಾಲಕ ನಾಪತ್ತೆ: ಮನಕಲಕುವಂತಿದೆ ಕುಟಂಬಸ್ಥರ ಗೋಳಾಟ - Boy missing

ನಿಮ್ಹಾನ್ಸ್​ನಲ್ಲಿ ಚಿಕಿತ್ಸೆ ಪಡೆಯಲೆಂದು ಒಡಿಶಾದಿಂದ ಬಂದಿದ್ದ ಕುಟುಂಬದ ವಿಶೇಷಚೇತನ ಬಾಲಕ ನಾಪತ್ತೆಯಾಗಿದ್ದು, ಪೋಷಕರು ಇದೀಗ ಮಗನನ್ನು ಹುಡುಕಿಕೊಡುವಂತೆ ಪೊಲೀಸ್​ ಆಯುಕ್ತರ ಕಚೇರಿಗೆ ಬಂದು ಮನವಿ ಮಾಡಿಕೊಂಡಿದ್ದಾರೆ.

orissa-based-demented-boy-goes-missing
ಬಾಲಕನನ್ನು ಕಳೆದುಕೊಂಡ ಕುಟುಂಬ

By

Published : Aug 13, 2022, 8:14 PM IST

ಬೆಂಗಳೂರು : ಇತ್ತೀಚೆಗೆ ತಾಯಿಯೊಬ್ಬಳು ಸಿಲಿಕಾನ್ ಸಿಟಿಯ ಸಂಪಂಗಿರಾಮನಗರದಲ್ಲಿ 4ನೇಯ ಮಹಡಿಯಿಂದ ವಿಶೇಷಚೇತನ ಬಾಲಕನನ್ನು ಎಸೆದು ತಾಯ್ತನಕ್ಕೆ ಅವಮಾನವಾಗುವಂತ ಕೆಲಸ ಮಾಡಿದ್ದಳು. ಆದರೆ ಈಗ ತಾಯಿಯ ಅಂತಃಕರಣ, ವಾತ್ಸಲ್ಯವನ್ನು ಎತ್ತಿ ಹಿಡಿಯುವ ಮನಮಿಡಿಯುವ ಪ್ರಸಂಗವೊಂದು ನಡೆದಿದೆ. ಚಿಕಿತ್ಸೆಗಾಗಿ ಕರೆತಂದಿದ್ದ ವಿಶೇಷಚೇತನ ಬಾಲಕ ನಾಪತ್ತೆಯಾಗಿದ್ದು, ಒಡಿಶಾ ಮೂಲದ ಪೋಷಕರ, ಗೋಳಾಟ ಅಲೆದಾಟ ಹೇಳತೀರದಾಗಿದೆ.

ಒಡಿಶಾ ಮೂಲದ ಪ್ರಸನ್ಜೀತ್ ದಾಸ್ (12) ನಾಪತ್ತೆಯಾಗಿರುವ ಬಾಲಕನಾಗಿದ್ದಾನೆ. ನಿಮ್ಹಾನ್ಸ್​ನಲ್ಲಿ ಈತನ ಚಿಕಿತ್ಸೆಗಾಗಿ ಒಡಿಶಾದ ಬಾದ್ರಕ್​ನಿಂದ ಪೋಷಕರು ಆಗಸ್ಟ್ 9ರಂದು ಬೆಂಗಳೂರಿಗೆ ಬಂದಿದ್ದರು. ಸಿದ್ಧಾಪುರ ಠಾಣಾ ವ್ಯಾಪ್ತಿಯ ಲಾಡ್ಜ್​ನಲ್ಲಿ ರೂಂ ಮಾಡಿಕೊಂಡಿದ್ದರು. ಶುಕ್ರವಾರ ರಾತ್ರಿ ರೂಂನಿಂದ ಬಾಲಕ ಏಕಾಏಕಿ ತಪ್ಪಿಸಿಕೊಂಡಿದ್ದು, ಬಾಲಕನನ್ನು ಹುಡುಕಿ ಕೊಡುವಂತೆ ಪೋಷಕರು ಪೊಲೀಸ್ ಆಯುಕ್ತರ ಕಚೇರಿಗೂ ಬಂದು ಅಳಲು ತೋಡಿಕೊಂಡಿದ್ದಾರೆ‌.

ಬಾಲಕನನ್ನು ಕಳೆದುಕೊಂಡ ಕುಟುಂಬ

ಆಟೋ ಚಾಲಕನಿಂದ ಸಹಾಯಹಸ್ತ:ಅಬ್ದುಲ್ ಎನ್ನುವ ಆಟೋ ಚಾಲಕನ ಸಹಾಯದಿಂದ ನಿನ್ನೆಯಿಂದ ಅಲೆಯುತ್ತಿದ್ದಾರೆ. ಬಾಲಕ ಯಾರಿಗಾದ್ರೂ ಕಂಡಲ್ಲಿ 8792559232 ನಂಬರಿಗೆ ಕರೆ ಮಾಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಇದನ್ನೂ ಓದಿ :7 ವರ್ಷದವಳಿದ್ದಾಗ ನಾಪತ್ತೆ: 9 ವರ್ಷಗಳ ಬಳಿಕ ಕುಟುಂಬ ಸೇರಿದ ಬಾಲಕಿ

ABOUT THE AUTHOR

...view details