ಕರ್ನಾಟಕ

karnataka

ETV Bharat / city

'ಉಪಚುನಾವಣೆ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ, ಜನರ ಎಚ್ಚರಿಕೆಯ ಗಂಟೆ' - Opposition leader Siddaramaiah statement on the by-election result news

ಹಾನಗಲ್​ನಲ್ಲಿ ನಿರೀಕ್ಷಿತ ಫಲಿತಾಂಶ ಬಂದಿದೆ. 10-15 ಸಾವಿರದಲ್ಲಿ‌ ಗೆಲ್ತೇವೆ ಎಂದುಕೊಂಡಿದ್ದೆವು. ಜನರಲ್ಲಿ ಮಾನೆ ಬಗ್ಗೆ ಉತ್ತಮ ಅಭಿಪ್ರಾಯವಿತ್ತು. ಬೊಮ್ಮಾಯಿ ಒಂದು ವಾರ ಕ್ಯಾಂಪೇನ್ ಮಾಡಿದ್ರು. ಅಧಿಕಾರ ದುರುಪಯೋಗ, ಹಣ ಹಂಚಿದ್ರು. ಆದರೂ ಅವರು ಅಲ್ಲಿ ಸೋತಿದ್ದಾರೆ. ದೇಶದ 30 ಕ್ಷೇತ್ರಗಳಲ್ಲಿ ಬೈ ಎಲೆಕ್ಷನ್ ನಡೆದಿದೆ. ಈ ಪೈಕಿ 8ರಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಉಳಿದ ಕಡೆ ಬೇರೆಯವರು ಗೆದ್ದಿದ್ದಾರೆ. ದೇಶದಲ್ಲಿ ಜನ ಬದಲಾವಣೆ ಬಯಸಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ

By

Published : Nov 2, 2021, 3:12 PM IST

ಬೆಂಗಳೂರು: ಉಪಚುನಾವಣೆ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ. ಆದರೆ ಎಚ್ಚರಿಕೆಯ ಗಂಟೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಾನಗಲ್​ನಲ್ಲಿ ನಿರೀಕ್ಷಿತ ಫಲಿತಾಂಶ ಬಂದಿದೆ. 10-15 ಸಾವಿರದಲ್ಲಿ‌ ಗೆಲ್ತೇವೆ ಎಂದುಕೊಂಡಿದ್ದೆವು. ನಮ್ಮ ಅಭ್ಯರ್ಥಿ ಮಾನೆ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯವಿತ್ತು. ಬೊಮ್ಮಾಯಿ ಒಂದು ವಾರ ಕ್ಯಾಂಪೇನ್ ಮಾಡಿದ್ರು. ಅವರದ್ದು ಶಿಗ್ಗಾಂವಿ, ಅದರ ಪಕ್ಕದಲ್ಲಿ ಹಾನಗಲ್. ಅಧಿಕಾರ ದುರುಪಯೋಗ, ಹಣ ಹಂಚಿದ್ರು. ಆದರೂ ಅವರು ಅಲ್ಲಿ ಸೋತಿದ್ದಾರೆ ಎಂದು ಟೀಕಿಸಿದರು.

'ಜನ ಬದಲಾವಣೆ ಬಯಸಿದ್ದಾರೆ':

ಜನ ಇವತ್ತು ಬದಲಾವಣೆ ಬಯಸಿದ್ದಾರೆ. ಇದು ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಅಂತ ನಾನು ಹೇಳಲ್ಲ. ಆದರೆ ಜನರ ಎಚ್ಚರಿಕೆಯ ಗಂಟೆ ಅಂತ ಹೇಳ್ತೇನೆ. ಹಾನಗಲ್ ಕ್ಷೇತ್ರದ ಮತದಾರರಿಗೆ ಅಭಿನಂದನೆ. ಸಿಂದಗಿ‌ ಕ್ಷೇತ್ರದ ಮತದಾರರಿಗೂ ಅಭಿನಂದನೆ. ಸಿಂದಗಿಯಲ್ಲಿ ನಮ್ಮ‌ ನಿರೀಕ್ಷೆ ಹುಸಿಯಾಗಿದೆ. ಅಲ್ಲಿ ತೀವ್ರ ಸ್ಪರ್ಧೆಯಾಗುತ್ತೆ ಎಂದುಕೊಂಡಿದ್ದೆವು. ದೊಡ್ಡ ಅಂತರದಲ್ಲಿ‌ ಸೋತಿದ್ದೇವೆ. ಆದರೆ ಕಳೆದ ಬಾರಿ ನಾವು‌ ಮೂರನೇ ಸ್ಥಾನದಲ್ಲಿದ್ದೆವು. ಈಗ ಎರಡನೇ ಸ್ಥಾನಕ್ಕೆ ಬಂದಿದ್ದೇವೆ. ಸೋಲು ಸೋಲೇ ಒಪ್ಪಿಕೊಳ್ಳಬೇಕು ಎಂದು ವಿಶ್ಲೇಷಣೆ ಮಾಡಿದರು.

ನಾನು ಮೊದಲೆರಡು ದಿನ ಪ್ರಚಾರ ಮಾಡಿದ್ದೆ. ಅಶೋಕ್ ಮನಗೂಳಿ ಜೆಡಿಎಸ್​ನಿಂದ ಬಂದವರು. ಅವರಿಗೆ ನಾವು ಟಿಕೆಟ್ ಕೊಟ್ಟಿದ್ದೆವು. ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರಿಗೆ ಹೊಂದಾಣಿಕೆಯಾಗಿಲ್ಲ. ದೇಶದ 30 ಕ್ಷೇತ್ರಗಳಲ್ಲಿ ಬೈ ಎಲೆಕ್ಷನ್ ನಡೆದಿದೆ. ಈ ಪೈಕಿ 8ರಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಉಳಿದ ಕಡೆ ಬೇರೆಯವರು ಗೆದ್ದಿದ್ದಾರೆ. ದೇಶದಲ್ಲಿ ಜನ ಬದಲಾವಣೆ ಬಯಸಿದ್ದಾರೆ ಎಂದು ತಿಳಿಸಿದರು.

ಜೆಡಿಎಸ್ ಠೇವಣಿ ಕಳೆದುಕೊಂಡ ವಿಚಾರ:

ಜೆಡಿಎಸ್ ಠೇವಣಿ ಕಳೆದುಕೊಂಡ ವಿಚಾರವಾಗಿ ಮಾತನಾಡಿ, ನಾನು ಮೊದಲೇ ಹೇಳಿದ್ದೆ. ಅವರು ಕೋಮುವಾದಿ ಪಕ್ಷದ ಜೊತೆ ಸೇರಿದ್ದಾರೆಂದು. ಈಗ ಎರಡೂ ಕಡೆ ಡಿಪಾಸಿಟ್ ಕಳೆದುಕೊಂಡಿದ್ದಾರೆ. ನಾನು ಜೆಡಿಎಸ್ ಬಗ್ಗೆ ಮಾತನಾಡಲ್ಲ. ಮುಂದಿನ ಚುನಾವಣೆಯಲ್ಲೂ ಇದೇ ಆಗಲಿದೆ ಎಂದು ಭವಿಷ್ಯ ನುಡಿದರು.

'ಬಿಜೆಪಿ ಅವನತಿ ಶುರು'

ಯಡಿಯೂರಪ್ಪ, ಅವರ ಮಗ ಆ್ಯಕ್ಟಿವ್ ಆಗಿ ಕ್ಯಾಂಪೇನ್ ಮಾಡಿದ್ರು. ಅವರನ್ನು ಕೆಳಗಿಳಿಸಿದ್ದು ಪರಿಣಾಮ ಬೀರಿಲ್ಲ ಎಂದು ಹೇಳಿದರು. ಇದೇ ವೇಳೆ ಜೆಡಿಎಸ್ ನಾಯಕರಿಗೆ ಆಹ್ವಾನ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಲ್ಲಿ ಆಗಲ್ಲ ಆಂದ್ರೆ ಇಲ್ಲಿ ಆಗಲ್ಲ ಅಂತಾನಾ? ಇಲ್ಲಿ ಹೊಂದಾಣಿಕೆಯಾಗಲಿದೆ. ಈ ಉಪಚುನಾವಣೆಯಿಂದ ಸರ್ಕಾರ ಹೋಗುತ್ತೆ ಅನ್ನಲ್ಲ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಬಿಜೆಪಿ ಅವನತಿ ಶುರುವಾಗಿದೆ. 2023ಕ್ಕೆ ಅಧಿಕಾರಕ್ಕೆ ಬರಲಿದೆ. ಸಿಎಂ ಯಾರು ಅನ್ನೋದು ಹೈಕಮಾಂಡ್ ನಿರ್ಧರಿಸುತ್ತೆ ಎಂದರು.

ಬಿಟ್ ಕಾಯಿನ್ ದಂಧೆ ವಿಚಾರ:

ಬಿಟ್ ಕಾಯಿನ್ ದಂಧೆ ವಿಚಾರ ಮಾತನಾಡಿ, ಶ್ರೀಕೃಷ್ಣನನ್ನು ಅರೆಸ್ಟ್ ಮಾಡಿದ್ರಲ್ಲಾ?. ಅವರು ಜನರ ಮುಂದೆ ದಾಖಲೆ ಇಡಲಿ. ಚಾರ್ಜ್ ಶೀಟ್ ಹಾಕಿದ್ದಾರೆ ಅದರ ದಾಖಲೆ ಇಡಲಿ. ಅದರಲ್ಲಿ ಯಾರೆಲ್ಲ ಇದ್ದಾರೆ ಹೇಳಲಿ. ಬೇರೆಯವರು ಇದ್ದರೂ ಹೇಳಲಿ, ಬಿಜೆಪಿದೂ ಹೇಳಲಿ. ಮಾಹಿತಿ ಇರೋದಕ್ಕೆ ಸಾಕ್ಷಿ ಕೊಡಬೇಕಿಲ್ಲ. ಅವರ ಬಳಿ ಅಧಿಕಾರ ಇದ್ಯಲ್ಲಾ ಕೊಡಿ. ಗಾಳಿಪಟ ಅಂತ ಹೇಳ್ತಾರಲ್ಲ ಇಡಿಗೆ ಯಾಕೆ ಕೊಟ್ರು. ಆಯ್ತಪ್ಪ ನಾವಿದ್ದಾಗ ಆರೋಪ ಬರಲಿಲ್ಲ. ಈಗ ಬಂದಿದೆ ನೀವು ತನಿಖೆ ಮಾಡಿಸಿ. ಯಾಕೆ ಇಡಿಗೆ ನೀವು ಕೊಟ್ಟಿದ್ದು ಎಂದು ಪ್ರಶ್ನಿಸಿದರು.

ಇಬ್ಬರು ರಾಜಕಾರಣಿಗಳಿದ್ದಾರೆ ಅನ್ನೋದು ಸತ್ಯ. ಯಾವ ಪಕ್ಷದವರು ಅನ್ನೋದು ಗೊತ್ತಿಲ್ಲ. ನೀವು ತನಿಖೆ ಮಾಡಿ ಸತ್ಯ ಪತ್ತೆ ಹಚ್ಚಿ. ಸತ್ಯ ಬಹಿರಂಗವಾದರೆ ಸರ್ಕಾರಕ್ಕೆ ಸಂಕಷ್ಟವಲ್ಲವೇ? ಅದಕ್ಕೆ ನಾನು ಸರ್ಕಾರಕ್ಕೆ ಸಂಕಷ್ಟ ಎಂದಿದ್ದು. ಸತ್ಯ ಹೊರಗೆ ಬರದೆ ಹೋದರೆ ಸರ್ಕಾರ ತಪ್ಪಿತಸ್ಥರನ್ನ ರಕ್ಷಣೆ ಮಾಡಿದಂತೆ ಎಂದು ಅಭಿಪ್ರಾಯಪಟ್ಟರು.

ಅಪ್ಪುಗೆ ಮರಣೋತ್ತರ ಪದ್ಮಶ್ರೀ ನೀಡುವ ವಿಚಾರ:

ಪುನೀತ್ ರಾಜ್​ಕುಮಾರ್​ಗೆ ಮರಣೋತ್ತರ ಪದ್ಮಶ್ರೀ ನೀಡುವ ವಿಚಾರ ಪ್ರಸ್ತಾಪ ಮಾಡಿದ ಸಿದ್ದರಾಮಯ್ಯ, ರಾಜ್ಯೋತ್ಸವ ಪ್ರಶಸ್ತಿ ಅವರು ಕೊಡಲಿ. ಆದರೆ ದೇಶದ ಪ್ರಶಸ್ತಿಯನ್ನ ಮೊದಲು ಕೊಡಬೇಕು. ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ಕೊಡಬೇಕು. ರಾಷ್ಟ್ರದ ಅತ್ಯುತ್ತಮ ಪ್ರಶಸ್ತಿ ನೀಡಬೇಕು ಎಂದರು.

ಇದನ್ನೂಓದಿ: ಹಾನಗಲ್ ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್​ ಅಭ್ಯರ್ಥಿ ಶ್ರೀನಿವಾಸ ಮಾನೆ ಜಯಭೇರಿ

ABOUT THE AUTHOR

...view details