ಬೆಂಗಳೂರು: ಕಂಬಳಿ ಹೊದ್ದು ಮತ ಪ್ರಚಾರ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ ನಿಲುವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಟ್ವೀಟ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಕೇವಲ ಕಂಬಳಿ ಹೊದ್ದು ಪ್ರಚಾರ ನಡೆಸಿದರೆ ಕುರಿಗಾಹಿಗಳ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಯೋಜನೆಯನ್ನು ಮತ್ತೆ ಆಚರಣೆಗೆ ತನ್ನಿ ಎಂದು ಸಲಹೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಚಿಕ್ಕೋಡಿ ತಾಲೂಕಿನ ಕುರಿಗಾಯಿ ನಾಯಿಂಗ್ಲಾಜ್ ವಾಸಪ್ಪ ಮಾನಿಯವರಿಗೆ ಸೇರಿದ ಸುಮಾರು 40 ಕುರಿಗಳು ಸಾವನ್ನಪ್ಪಿವೆ. ಇಂತಹವರಿಗೆ ನೆರವಾಗಲೆಂದೇ ನಾನು ಜಾರಿಗೆ ತಂದಿದ್ದ 'ಅನುಗ್ರಹ' ಯೋಜನೆಯನ್ನು ಸ್ಥಗಿತಗೊಳಿಸಿದ್ದ ರಾಜ್ಯ ಬಿಜೆಪಿ ಸರ್ಕಾರವನ್ನು ಕಟುಕರ ಸರ್ಕಾರ ಎನ್ನದೆ ಬೇರೆ ಹೇಗೆ ಕರೆಯೋಣ? ಎಂದು ಪ್ರಶ್ನಿಸಿದ್ದಾರೆ.
ಕಂಬಳಿ ಹೊದ್ದು ಚುನಾವಣಾ ಪ್ರಚಾರ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ಒಂದು ವಾರದಿಂದ ಸಿಎಂ ಬಸವರಾಜ ಬೊಮ್ಮಾಯಿ ನಿರಂತರವಾಗಿ ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಹಾವೇರಿ ಜಿಲ್ಲೆ ಇವರ ತವರಾಗಿದೆ. ಈ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಹಾನಗಲ್ ವಿಧಾನಸಭೆ ಉಪಚುನಾವಣೆ ಗೆಲುವು ಸಿಎಂಗೆ ಪ್ರತಿಷ್ಠೆಯದ್ದಾಗಿದೆ. ಇದಕ್ಕೂ ಮುಖ್ಯವಾಗಿ ಬಿಜೆಪಿ ತಾನು ಕಳೆದುಕೊಂಡಿರುವ ಕ್ಷೇತ್ರವನ್ನು ಮತ್ತೆ ಗೆದ್ದುಕೊಳ್ಳಬೇಕಾದ ಸವಾಲು ಸಹ ಇದೆ. ಕಾಂಗ್ರೆಸ್ ಉಪಚುನಾವಣೆಯನ್ನು ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಬಿಜೆಪಿಗೆ ಸಾಕಷ್ಟು ಪ್ರಬಲ ಪ್ರತಿಸ್ಪರ್ಧೆವೊಡ್ಡುತ್ತಿದೆ.
ಇದನ್ನೂ ಓದಿ:ಉಪ ಕದನ: ಸಿಂದಗಿಯಲ್ಲಿ ಸಿಎಂ ಭರ್ಜರಿ ರೋಡ್ ಶೋ