ಬೆಂಗಳೂರು: ಪುನೀತ್ ಒಬ್ಬ ಪ್ರತಿಭಾವಂತ ನಟ, ಇನ್ನೂ ಬಹಳ ವರ್ಷ ನಮ್ಮ ಜೊತೆ ಇರಬೇಕಾಗಿತ್ತು. ಅವರ ಸಾವಿನಿಂದ ಕನ್ನಡ ಚಿತ್ರರಂಗಕ್ಕೆ ಅಷ್ಟೇ ಅಲ್ಲ ಇಡೀ ದೇಶದ ಚಿತ್ರರಂಗಕ್ಕೆ ನಷ್ಟವಾಗಿದೆ. ಆ ನಷ್ಟ ತುಂಬುವುದು ಬಾರಿ ಕಷ್ಟ. ನಿನ್ನೆ, ಇವತ್ತು ಕರ್ನಾಟಕದ ಜನ ಕಣ್ಣೀರು ಹಾಕುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಅಪ್ಪು ಪಾರ್ಥಿವ ಶರೀರ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಪುನೀತ್ ರಾಜ್‌ಕುಮಾರ್ ನಿಧನದಿಂದ ವಿಶೇಷವಾಗಿ ಯುವಕರು ದಿಗ್ಬ್ರಾಂತರಾಗಿದ್ದಾರೆ. ಪುನೀತ್‌ಗೆ ಚಿರಶಾಂತಿ ದೊರಕಲಿ ಅಂತ ಪ್ರಾರ್ಥನೆ ಮಾಡುತ್ತೇನೆ. ಸಿಕ್ಕಿದಾಗೆಲ್ಲಾ ಮಾಮ ಮಾಮ ಅಂತ ಕರೆಯುತ್ತಿದ್ದ ಎಂದು ಅಪ್ಪು ಅವರೊಂದಿಗೆ ಇದ್ದ ಒಡನಾಟವನ್ನು ಹಂಚಿಕೊಂಡರು.