ಬೆಂಗಳೂರು:ನಾನು ದಲಿತರ ಬಗ್ಗೆ ಎಲ್ಲಿಯೂ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಬಿಜೆಪಿಯವರು ಈ ವಿಚಾರವನ್ನು ತಿರುಚುವ ಯತ್ನ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನ ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಿಜೆಪಿಯವರು ಸಂವಿಧಾನ ಬದಲಾಯಿಸ್ತೇವೆ ಅಂತಾರೆ. ಸಂವಿಧಾನದಲ್ಲಿ ಸಮಸಮಾಜದ ಬಗ್ಗೆ ಹೇಳಿದೆ. ಅಂತಹ ಸಂವಿಧಾನವನ್ನು ಅವರು ತೆಗೆಯೋಕೆ ಹೊರಟಿದ್ದಾರೆ. ಅದಕ್ಕೆ ನಾನು ದಲಿತರು ಸ್ವಾರ್ಥಕ್ಕೆ ಅಲ್ಲಿಗೆ ಹೋಗಿದ್ದಾರೆ ಎಂದಿದ್ದೆ. ಸಿಂದಗಿ ಪ್ರಚಾರದ ವೇಳೆ ಆ ಮಾತು ಹೇಳಿದ್ದೆ. ನಾನು ದಲಿತರ ಬಗ್ಗೆ ಎಲ್ಲೂ ಹೇಳಿಲ್ಲ. ಕಾರಜೋಳ ಸೇರಿ ಕೆಲವರ ಬಗ್ಗೆ ಮಾತನಾಡಿದ್ದೆ. ಅದನ್ನೇ ತಿರುಚಿ ಎತ್ತಿಕಟ್ಟೋಕೆ ನೋಡ್ತಿದ್ದಾರೆ ಎಂದರು.
ಅಂದು ದಲಿತ ಸಮಾವೇಶದಲ್ಲಿ ನೂರಾರು ಜನ ಎಡಗೈ ಸಮುದಾಯದವರಿದ್ದರು. ನಾನು ದಲಿತರ ಬಗ್ಗೆ ಹೇಳಿದ್ದರೆ ಅಲ್ಲೇ ಪ್ರತಿಭಟನೆ ಮಾಡಬೇಕಿತ್ತಲ್ಲ. ಅಲ್ಲಿದ್ದವರೇ ನನ್ನ ಮಾತಿಗೆ ಜೈಕಾರ ಹಾಕಿದ್ದಾರೆ. ಈಗ ಬಿಜೆಪಿಯವರು ಬಣ್ಣ ಕಟ್ಟುತ್ತಿದ್ದಾರೆ. ಬಿಜೆಪಿ ಪ್ರತಿಭಟನೆಗೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಲೀಡರ್ಸ್ ಸಾಕಷ್ಟು ಮಂದಿ ಇದ್ದಾರೆ. ದಲಿತರ ಬಗ್ಗೆ ಅಪಾರ ಅಭಿಮಾನ ನನಗಿದೆ. ಅವರು ಮೇಲೆ ಬರಬೇಕೆಂಬುದು ನನ್ನ ಇಚ್ಚೆ. ಬಿಜೆಪಿಯವರಿಗೆ ದಲಿತರ ಬಗ್ಗೆ ಕಾಳಜಿ ಏನಿದೆ?. ಅಂಬೇಡ್ಕರ್ ಕಾರ್ಮಿಕ ಮಂತ್ರಿ ಮಾಡಿದ್ದು ಯಾವ ಪಕ್ಷ? ಆಗ ಬಿಜೆಪಿ ಪಕ್ಷ ಇತ್ತಾ? ಅಂಬೇಡ್ಕರ್ ಅವರದ್ದೂ ರಿಪಬ್ಲಿಕ್ ಪಾರ್ಟಿ ಇತ್ತು. ಆದರೂ ನೆಹರು ಅವರನ್ನು ಸಚಿವರನ್ನಾಗಿ ಮಾಡಿದ್ದರು ಎಂದರು.
ಕಾಂಗ್ರೆಸ್ ಮಾಡಿದ್ದು:ಚತುರ್ವಣ ವ್ಯವಸ್ಥೆ ಮಾಡಿದವರು ಅವರು. ಇಂತವರಿಂದ ನಾವು ಪಾಠ ಕಲಿಯಬೇಕಾ? ರಾಜಕೀಯಕ್ಕಾಗಿ ಈ ರೀತಿ ಮಾಡಿದ್ದಾರೆ. ಬಿಜೆಪಿಯವರು ದಲಿತ ನಾಯಕರನ್ನ ಮುಗಿಸಿದ ವಿಚಾರ ಮಾತನಾಡಿ, ಶ್ರೀನಿವಾಸ್ ಪ್ರಸಾದ್ ಬಿಜೆಪಿಗೆ ಹೋದರು. ಶ್ರೀನಿವಾಸ್ ಪ್ರಸಾದ್ ಮಿನಿಸ್ಟರ್ ಮಾಡಿದ್ದು ಯಾರು? ಪರಮೇಶ್ವರ್ ಡಿಸಿಎಂ ಮಾಡಿದ್ದು ಯಾರು? ಆಂಜನೇಯಗೆ ಸಚಿವ ಸ್ಥಾನ ನೀಡಿದ್ದು ಯಾರು?. ಗುತ್ತಿಗೆ ಮೀಸಲಾತಿ ತಂದಿದ್ದು ಯಾರು? ಇದೆಲ್ಲವನ್ನೂ ಮಾಡಿದ್ದು ಕಾಂಗ್ರೆಸ್ ಪಕ್ಷ. ಛಲವಾದಿ ಇಲ್ಲಿದ್ದಾಗ ಕಾಂಗ್ರೆಸ್ ಅನ್ನು ಹೊಗಳುತ್ತಿದ್ದರು. ಈಗ ಅಲ್ಲಿಗೆ ಹೋಗಿದ್ದಾರೆ ಅಲ್ಲಿ ಹೊಗಳ್ತಿದ್ದಾರೆ. ಅದಕ್ಕೆಲ್ಲ ಕಿಮ್ಮತ್ತಿಲ್ಲ ಬಿಡಿ. ನಾನು ದಲಿತರ ಬಗ್ಗೆ ಕಾಳಜಿ ಇಟ್ಟವನು. ಅವರಿಗೆ ಆರ್ಥಿಕ ಶಕ್ತಿ ಬರಬೇಕೆಂದು ಪ್ರತಿಪಾದಿಸಿದವನು ಎಂದರು.