ಕರ್ನಾಟಕ

karnataka

ETV Bharat / city

ಆಪರೇಷನ್ ಕಮಲ ಆಡಿಯೋ ಪ್ರಕರಣ: ವಿಚಾರಣೆ ಮುಂದೂಡಿದ ಕಲಬುರಗಿ ಹೈಕೋರ್ಟ್​ - Operation Lotus Audio Case

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಹಕರಿಸುವಂತೆ ಹಣದ ಆಮಿಷವೊಡ್ಡಿದ್ದ ಆಡಿಯೋ ಪ್ರಕರಣವನ್ನು ಮಾರ್ಚ್​​ 5ಕ್ಕೆ ಮುಂದೂಡಿಕೆಯಾಗಿರುವುದು, ಸಿಎಂ ಬಿಎಸ್‌ವೈ ಸೇರಿದಂತೆ ಅನೇಕರಿಗೆ ಮತ್ತೆ ರಿಲಿಫ್ ಸಿಕ್ಕಿದೆ.

ಕಲಬುರಗಿ ಹೈಕೋರ್ಟ್​
ಕಲಬುರಗಿ ಹೈಕೋರ್ಟ್​

By

Published : Feb 20, 2021, 7:09 PM IST

ಕಲಬುರಗಿ:ಸಿಎಂ ಯಡಿಯೂರಪ್ಪ ವಿರುದ್ಧ ಆಪರೇಷನ್ ಕಮಲ ಆಡಿಯೋ ಪ್ರಕರಣ ತಡೆಯಾಜ್ಞೆಗೆ ತೆರವು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ಇಂದು ಕಲಬುರಗಿ ಹೈಕೋರ್ಟ್ ಪೀಠದಲ್ಲಿ ನಡೆದಿದ್ದು, ದೂರುದಾರ ವಕೀಲರು ಸಮಯ ಕೇಳಿದ್ದರಿಂದ ವಿಚಾರಣೆ ಮತ್ತೆ ಮುಂದೂಡಲಾಗಿದೆ.

ದೇವದುರ್ಗ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿದ್ದ ಕಲಬುರಗಿ ಹೈಕೋರ್ಟ್​ಗೆ, ತಡೆಯಾಜ್ಞೆ ತೆರವುಗೊಳಿಸುವಂತೆ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಪುತ್ರ ಶರಣಗೌಡ ಕಂದಕೂರ ಅರ್ಜಿ ಸಲ್ಲಿಸಿದರು.

ಈ ಸಂಬಂಧ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯದ ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಕುನ್ಹಾ ಪೀಠದಲ್ಲಿ ಇಂದು ಅರ್ಜಿ ವಿಚಾರಣೆ ನಡೆಯಿತು. ದೂರುದಾರ ವಕೀಲರು ಸಮಯ ಕೇಳಿದ್ದರಿಂದ ಅರ್ಜಿ ವಿಚಾರಣೆ ಮಂದೂಡಲಾಗಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಸುವಂತೆ ಹಣದ ಆಮಿಷವೊಡ್ಡಿದ್ದ ಆಡಿಯೋ ಪ್ರಕರಣವನ್ನು ಮಾರ್ಚ್ 5ಕ್ಕೆ ಮುಂದೂಡಿಕೆ ಮಾಡಿರುವುದು, ಸಿಎಂ ಬಿಎಸ್‌ವೈ ಸೇರಿದಂತೆ ಅನೇಕರಿಗೆ ಮತ್ತೆ ರಿಲಿಫ್ ಸಿಕ್ಕಿದೆ.

ABOUT THE AUTHOR

...view details