ಬೆಂಗಳೂರು :ಪಠ್ಯ ಪರಿಷ್ಕರಣೆ ವಿಚಾರವನ್ನು ನಾವು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಏನು ಬದಲಾವಣೆ ಮಾಡಬೇಕೋ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಹಲವು ಸಾಹಿತಿಗಳು, ಸ್ವಾಮೀಜಿಗಳು, ಹಿರಿಯರು ನಿನ್ನೆ ಏನೆಲ್ಲ ಮಾತಾಡಿದ್ದಾರೋ ಅದರ ಬಗ್ಗೆ ಮಾಹಿತಿ ತರಿಸಿಕೊಂಡು ಪರಿಶೀಲಿಸುತ್ತೇವೆ. ಸರ್ಕಾರ ಬದಲಾವಣೆ ಮಾಡುವ ವಿಚಾರದಲ್ಲಿ ಮುಕ್ತವಾಗಿದೆ. ನಾವು ಯಾವುದನ್ನೂ ಪ್ರತಿಷ್ಠೆಯಾಗಿ ತಗೊಂಡಿಲ್ಲ. ಈಗಾಗಲೇ ಪಠ್ಯ ಪರಿಷ್ಕರಣೆ ಪಬ್ಲಿಕ್ ಡೊಮೇನ್ನಲ್ಲಿದೆ. ಲೋಪ ಇದ್ದರೆ ತಿಳಿಸಬಹುದು ಎಂದರು.
ಅಗ್ನಿಪಥ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಬೆಂಕಿಗೆ ತುಪ್ಪ ಸುರೀತಿದೆ. ಅಗ್ನಿಪಥ ಯೋಜನೆ ಮೂಲಕ ಸಶಕ್ತ ಯುವ ಶಕ್ತಿ ರೂಪಿಸಲಾಗುತ್ತೆ. ಈಗಾಗಲೇ ಸೇನಾ ಪರೀಕ್ಷೆ ಬರೆದ ಕೆಲವರಿಗೆ ಆತಂಕ ಇರಬಹುದು. ಅದನ್ನೆಲ್ಲ ಕೇಂದ್ರ ಸರ್ಕಾರ ಗಮನಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ. ಆದರೆ ಈ ನೆಪದಲ್ಲಿ ಪ್ರತಿಭಟನೆ, ರೈಲಿಗೆ ಬೆಂಕಿ ಹಾಕೋದು ಸರಿಯಲ್ಲ. ಖಾನಾಪುರ ಬಂದ್ ಕರೆ ಕೊಟ್ಟಿದ್ದಾರೆ. ಕಾಂಗ್ರೆಸ್ ಬೆಂಕಿಗೆ ತುಪ್ಪಹಾಕ್ತಿರೋದಕ್ಕೆ ಇದೇ ಸಾಕ್ಷಿ ಎಂದು ಕಿಡಿ ಕಾರಿದರು.