ಕರ್ನಾಟಕ

karnataka

Open Book Exam: ಏನಿದು ತೆರೆದ ಪುಸ್ತಕ ಪರೀಕ್ಷೆ? ವಿಟಿಯು ಪರಿಚಯಿಸಲಿರುವ ಈ ಮಾದರಿ ನಮ್ಮ ಶಿಕ್ಷಣ ವ್ಯವಸ್ಥೆಗೆ ಎಷ್ಟು ಪ್ರಸ್ತುತ.!

By

Published : Oct 5, 2021, 8:22 PM IST

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆಯ್ದ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ 'ತೆರೆದ ಪುಸ್ತಕ' ಪರೀಕ್ಷೆಗಳನ್ನು ಪರಿಚಯಿಸಲಿದೆ. ವಿನ್ಯಾಸ-ಆಧಾರಿತ ವಿಷಯಗಳನ್ನು ಹೊಂದಿರುವ ಕೋರ್ಸ್‌ಗಳಿಗೆ ಹಾಗೂ ಹೆಚ್ಚಾಗಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಆರ್ಕಿಟೆಕ್ಚರ್‌ನಂತಹ ವಿಷಯಕ್ಕೆ ಈ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತೆ.‌

Open Book Exam
Open Book Exam

ಬೆಂಗಳೂರು: ರಾಜ್ಯದಲ್ಲಿ ತೆರೆದ ಪುಸ್ತಕ ಪರೀಕ್ಷೆ ಹಿಂದಿನಿಂದಲೂ ಚರ್ಚೆಯಲ್ಲಿರುವ ಸುದ್ದಿ.‌ ಪ್ರಸಕ್ತ ವರ್ಷದಿಂದ ಕೆಲವು ಇಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ತೆರೆದ ಪುಸ್ತಕ ಪರೀಕ್ಷೆಗಳನ್ನು ಪರಿಚಯಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಯೋಜನೆ ರೂಪಿಸಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆಯ್ದ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ 'ತೆರೆದ ಪುಸ್ತಕ' ಪರೀಕ್ಷೆಗಳನ್ನು ಪರಿಚಯಿಸಲಿದೆ. ವಿನ್ಯಾಸ - ಆಧಾರಿತ ವಿಷಯಗಳನ್ನು ಹೊಂದಿರುವ ಕೋರ್ಸ್‌ಗಳಿಗೆ ಹಾಗೂ ಹೆಚ್ಚಾಗಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಆರ್ಕಿಟೆಕ್ಚರ್‌ನಂತಹ ವಿಷಯಕ್ಕೆ ಈ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತೆ.‌ ಸದ್ಯ, ಅಧ್ಯಯನ ಮಂಡಳಿಯು ತನ್ನ ಶಿಫಾರಸುಗಳನ್ನು ಸಲ್ಲಿಸಿದ ನಂತರ ಅಧಿಕೃತ ಆದೇಶ ನೀಡಲಿದೆ.

ಡಾ.ಸುನೀಲ್‍ಕುಮಾರ್

ಇನ್ನು ಈ ಓಪನ್ ಬುಕ್ ಎಕ್ಸಾಂ ಸಿಸ್ಟಂ ಕುರಿತು ಅಲೆಯನ್ಸ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಪರೀಕ್ಷಾ ಮೌಲ್ಯೀಕರಣ ವಿಭಾಗದ ರಿಜಿಸ್ಟ್ರಾರ್​ ಆಗಿರುವ ಡಾ.ಸುನೀಲ್‍ಕುಮಾರ್ ಈಟಿವಿ ಭಾರತ್ ಜತೆ ವಿಚಾರ ಹಂಚಿಕೊಂಡಿದ್ದಾರೆ:

ಏನಿದು ಓಪನ್‌ ಬುಕ್ ಎಕ್ಸಾಮಿನೇಷನ್ ಸಿಸ್ಟಮ್?

ಓಪನ್ ಬುಕ್ ಪರೀಕ್ಷೆ ಎಂದರೆ ಇದರಲ್ಲಿ ವಿದ್ಯಾರ್ಥಿಗಳು ತಮ್ಮ ತರಗತಿಯ ಟಿಪ್ಪಣಿಗಳು, ಪ್ರೊಫೆಸರ್ ಪೂರೈಸಿರುವ ವಸ್ತುವಿಷಯ, ಪಠ್ಯಪುಸ್ತಕಗಳು ಮತ್ತು ಸಂಬಂಧಿತ ಸಂಸ್ಥೆ ಪೂರೈಸಿರುವ ಯಾವುದೇ ಇತರ ಅಧಿಕೃತ ವಸ್ತು ವಿಷಯಗಳನ್ನು ಪರಾಮರ್ಶಿಸಿ ಬರೆಯಲು ಅವಕಾಶ ಮಾಡಿಕೊಡಲಾಗುವ ಪರೀಕ್ಷೆಯಾಗಿದೆ. ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಮತ್ತು ಪರೀಕ್ಷೆಗೆ ಉತ್ತರಿಸಲು ವಸ್ತು ವಿಷಯವನ್ನು ಪೂರೈಸಲಾಗುತ್ತದೆ. ಇದು ಮನೆಯಲ್ಲಿಯೇ ಪರೀಕ್ಷೆ ಬರೆಯುವಂತಿರುತ್ತೆ.

ನಮ್ಮ ಶಿಕ್ಷಣ ವ್ಯವಸ್ಥೆಗೆ ಇದು ಎಷ್ಟು ಪ್ರಸ್ತುತ!

ವಿಭಿನ್ನ ಅಧ್ಯಯನ ಕೈಗೊಳ್ಳಲು ಈ ಓಪನ್ ಬುಕ್ ಪರೀಕ್ಷೆ ಅಗತ್ಯ. ಇದು ನಮ್ಮ ಸಾಂಪ್ರದಾಯಿಕ ಬೋಧನಾ ರೀತಿಗಿಂತ ವಿಭಿನ್ನವಾಗಿ ಇರಲಿದೆ. ಇದರಲ್ಲಿ ಪ್ರತ್ಯೇಕವಾದ ಮತ್ತು ನಿರ್ದಿಷ್ಟ ಮೌಲ್ಯೀಕರಣದ ಅಳತೆ ಇರುತ್ತದೆ. ಬಹುತೇಕ ವಿದ್ಯಾಸಂಸ್ಥೆಗಳಲ್ಲಿ ಪ್ರೊಫೆಸರ್​ಗಳು ತರಗತಿಯಲ್ಲಿ ಬೋಧಿಸಲು ಹಲವಾರು ಕ್ರಮಗಳೊಂದಿಗೆ ಸಜ್ಜಾಗಿರುತ್ತಾರೆ. ಅವುಗಳಲ್ಲಿ ಪ್ರಕರಣದ ಅಧ್ಯಯನಗಳು, ವಿಡಿಯೋಗಳು, ಪಠ್ಯಕ್ರಮ ವಸ್ತುವಿಷಯ ಮುಂತಾದವುಗಳು ಸೇರಿರುತ್ತವೆ.

ಯಾವ ಕೋರ್ಸ್​ಗೆ‌ ಇದು ಸೂಕ್ತ?

ಈ ವ್ಯವಸ್ಥೆಗಾಗಿ ಪ್ರತ್ಯೇಕ ಕೌಶಲ್ಯಗಳನ್ನು ಹೊಂದುವ ಅಗತ್ಯ ಇರುವ ಕ್ರಮಗಳ ಅನುಷ್ಠಾನದ ಜೊತೆಗೆ ಭಾರತದಲ್ಲಿ ಈ ರೀತಿಯ ತೆರೆದ ಪುಸ್ತಕದ ಪರೀಕ್ಷೆಗಳನ್ನು ಅನುಷ್ಠಾನಗೊಳಿಸಬಹುದಾಗಿದೆ. ಇದನ್ನು ಅನುಷ್ಠಾನಗೊಳಿಸಿದರೆ ಅದು ಯಾವ ಕೋರ್ಸ್‍ಗೆ ಸೂಕ್ತವಾಗಿರುತ್ತದೆ. ಓಪನ್ ಬುಕ್ ಅಥವಾ ತೆರೆದ ಪುಸ್ತಕದ ಪರೀಕ್ಷೆಯನ್ನು ಯಾವುದೇ ಕಾರ್ಯಕ್ರಮಗಳಲ್ಲಿ ಅನುಷ್ಠಾನಗೊಳಿಸಬಹುದು. ಇದರಲ್ಲಿ ಪರೀಕ್ಷೆಗೆ ಪ್ರತ್ಯೇಕ ರೀತಿಯ ಪ್ರಶ್ನೆಪತ್ರಿಕೆ ಹಾಗೂ ವಿದ್ಯಾರ್ಥಿಗಳ ವಿಶ್ಲೇಷಣಾ ಕೌಶಲ್ಯದ ಅಗತ್ಯವಿರುತ್ತದೆ. ಇಂತಹ ಪರೀಕ್ಷೆಗೆ ಸಿದ್ಧವಾಗಲು ಸೆಮಿಸ್ಟರ್ ಅವಧಿಯಲ್ಲಿಯೇ ವಿದ್ಯಾರ್ಥಿಗಳಿಗೆ ತರಬೇತಿ ನೀಡಬಹುದಾಗಿದೆ.

ಸಾಧಕ-ಬಾಧಕಗಳು ಯಾವುವು?

ಈ ರೀತಿಯ ಪುಸ್ತಕ ತೆರೆದು ನೋಡಿ ಬರೆಯುವಂತಹ ಪರೀಕ್ಷೆ ವಿದ್ಯಾರ್ಥಿಗಳಿಗೆ ಏಕೆ ಉಪಯೋಗಿ ಆಗಿರಬಹುದು ಎಂದರೆ, ನೆನಪಿನಲ್ಲಿಡಬೇಕಾಗಿ ಬರುವ ಕಲಿಕೆಯನ್ನು ಇದು ಇಲ್ಲವಾಗಿಸುತ್ತದೆ. ನಿರ್ದಿಷ್ಟ, ಪ್ರಮುಖ ಕೌಶಲ್ಯಗಳನ್ನು ಅಳವಡಿಸುವಲ್ಲಿ ಅಥವಾ ಪರೀಕ್ಷಿಸುವುದು ಇದರಿಂದ ಸಾಧ್ಯವಾಗದು.

ಯಾವ ರಾಜ್ಯಗಳು-ದೇಶಗಳಲ್ಲಿ ಈ ವ್ಯವಸ್ಥೆ ಬಳಕೆಯಲ್ಲಿದೆ?

ಯುಎಸ್‍ಎನಲ್ಲಿ ಅನೇಕ ವಿದ್ಯಾಸಂಸ್ಥೆಗಳು ಈ ರೀತಿಯ ಪುಸ್ತಕ ತೆರೆದು ನೋಡಿ ಬರೆಯುವ ಪರೀಕ್ಷೆಗಳನ್ನು ಹೊಂದಿವೆ. ಭಾರತದಲ್ಲಿ ದಿಲ್ಲಿ ವಿಶ್ವವಿದ್ಯಾಲಯ, ಸಾವಿತ್ರಿಬಾಯ್ ಪುಲೆ ಪುಣೆ ವಿಶ್ವವಿದ್ಯಾಲಯ, ರಾಯಪುರದ ಕಳಿಂಗ ವಿಶ್ವವಿದ್ಯಾಲಯ, ಪಂಜಾಬ್‍ನ ಚಂಡೀಗಢ ವಿಶ್ವವಿದ್ಯಾಲಯ ಮುಂತಾದವುಗಳು ಈ ರೀತಿಯ ಪುಸ್ತಕ ತೆರೆದು ನೋಡಿ ಬರೆಯುವ ಪರೀಕ್ಷಾ ವ್ಯವಸ್ಥೆಯನ್ನು ಹೊಂದಿವೆ.

ಇಂಜಿನಿಯರಿಂಗ್ ವಿಭಾಗದಲ್ಲಿ ಅಳವಡಿಸಿದರೆ ಅದು ಎಷ್ಟು ಪ್ರಸ್ತುತ? ಅದು ಹೇಗೆ ಇರಲಿದೆ?

ಇಂಜಿನಿಯರಿಂಗ್ ವಿಭಾಗದಲ್ಲಿ ಇದನ್ನು ಅನುಷ್ಠಾನಗೊಳಿಸಿದರೆ ಅದು ಎಷ್ಟು ಪ್ರಸ್ತುತವಾಗಿರಬಹುದು ಮತ್ತು ಅದು ಹೇಗಿರಲಿದೆ ಎನ್ನುವ ವಿಚಾರವಾಗಿ ಮಾತಾನಾಡಿರುವ ಡಾ ಸುನೀಲ್ ಕುಮಾರ್, ಇದನ್ನು ಇಂಜಿನಿಯರಿಂಗ್‍ನ ಎಲ್ಲಾ ಕೋರ್ಸ್‍ಗಳಲ್ಲಿ ಅನುಷ್ಠಾನಕ್ಕೆ ತರಬಹುದು. ಏಕೆಂದರೆ ಇದರಲ್ಲಿ ವಿದ್ಯಾರ್ಥಿಗಳು ಪ್ರಯೋಗಾತ್ಮಕವಾಗಿರುವ ಅಗತ್ಯವಿರುತ್ತದೆ. ಅಲ್ಲದೆ, ಹಲವಾರು ಸಮಸ್ಯೆಗಳು ಮತ್ತು ಅವುಗಳ ಪರಿಹಾರಗಳನ್ನು ಅರ್ಥ ಮಾಡಿಕೊಳ್ಳುವ ಹಾಗೂ ಸೃಜನಾತ್ಮಕವಾಗಿರುವ ಅಗತ್ಯವಿರುತ್ತದೆ ಎಂದಿದ್ದಾರೆ

ABOUT THE AUTHOR

...view details