ಬೆಂಗಳೂರು:ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜರ್ಮನಿಯ ಮ್ಯೂನಿಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಇವುಗಳ ಆಶ್ರಯದಲ್ಲಿ, ಜರ್ಮನಿಯ ಸಿರಿಗನ್ನಡ ಕೂಟದ ಸಹಯೋಗದೊಂದಿಗೆ ವಿದೇಶಿ ಕನ್ನಡ ಶಿಕ್ಷಕರಿಗೆ ಕನ್ನಡ ಕಲಿಕೆಯ ಕುರಿತು ಆನ್‌ಲೈನ್ ತರಬೇತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕ.ಅ.ಪ್ರಾ.ದ ಅಧ್ಯಕ್ಷ ಟಿ.ಎಸ್.ನಾಗಾಭರಣ ಮಾತನಾಡಿದರು.
'ಉದ್ಯೋಗದ ನಿಮಿತ್ತ ಅಥವಾ ವಿವಿಧ ಕಾರಣಗಳಿಂದ ಅನ್ಯನಾಡಿನಲ್ಲಿ, ಅನ್ಯ ಪರಿಸರದಲ್ಲಿ ಅನ್ಯಭಾಷಿಕರೊಂದಿಗೆ ಬೆರೆತು ಕನ್ನಡದ ಕಂಪನ್ನು ಪಸರಿಸುತ್ತಿರುವ ಜರ್ಮನಿಯ ಮ್ಯೂನಿಕ್ ನಗರದ ಸಿರಿಗನ್ನಡ ಕೂಟಕ್ಕೆ ಅಭಿನಂದನೆ ಸಲ್ಲಿಸಿದರು. ಅನ್ಯ ಪರಿಸರದಲ್ಲಿ ಜೀವನ ನಡೆಸುತ್ತಿದ್ದರೂ ಮೂಲ ಸೆಲೆ, ಮೂಲ ನೆಲೆ, ಹೃದಯದ ಅಂತರ್ಯದಲ್ಲಿದ್ದ ಕನ್ನಡವನ್ನು ಭವಿಷ್ಯದ ಪೀಳಿಗೆಯಲ್ಲಿ ಪಸರಿಸುತ್ತ ನಾಳಿನ ಕನ್ನಡಿಗರನ್ನು ನಿರ್ಮಿಸುತ್ತಿರುವುದು ಹೆಮ್ಮೆಯ ಸಂಗತಿ' ಎಂದು ಟಿ.ಎಸ್.ನಾಗಾಭರಣ ಮೆಚ್ಚುಗೆ ವ್ಯಕ್ತಪಡಿಸಿದರು.