ಕರ್ನಾಟಕ

karnataka

ETV Bharat / city

ಗ್ರಾಹಕರಿಗೆ ಕಣ್ಣೀರು ತರಿಸೋ ಈರುಳ್ಳಿ: ಇ‌ನ್ನು ಎಷ್ಟು ತಿಂಗಳು ಈ ಬೆಲೆ ಇರುತ್ತೆ? - ಎಪಿಎಂಸಿ ಮಾರುಕಟ್ಟೆ

ರಾಜ್ಯದಲ್ಲಿ ಅತಿವೃಷ್ಟಿಯಾಗಿ ರೈತರಲ್ಲಿ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ ಇದೀಗ ಗ್ರಾಹಕರ ಕಿಸೆಗೂ ಕತ್ತರಿ ಹಾಕುತ್ತಿದೆ.

Onion prices continue to high in Karnataka
ಗಗನಕ್ಕೇರಿದ ಈರುಳ್ಳಿ ಬೆಲೆ

By

Published : Nov 26, 2019, 8:50 PM IST

ಬೆಂಗಳೂರು:ರಾಜ್ಯದಲ್ಲಿ ಅತಿವೃಷ್ಟಿಯಾಗಿ ರೈತರಿಗೆ ಈರುಳ್ಳಿ ಹೊಡೆತ ಕೊಟ್ಟರೆ ಗ್ರಾಹಕರಿಗೆ ತಲೆಬಿಸಿ ಉಂಟು ಮಾಡಿದೆ.

ನವೆಂಬರ್​​ ಆರಂಭದಲ್ಲಿ ಸ್ವಲ್ಪಮಟ್ಟಿಗೆ ಬೆಲೆ ಏರಿಕೆ ಕಂಡಿತು. ಇದೀಗ ಬೆಲೆ ಗಗನಕ್ಕೇರಿದೆ. ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿಗೆ ₹ 100-120 ಇದೆ. ಕಡಿಮೆ ಗುಣಮಟ್ಟದ ಈರುಳ್ಳಿ ಕೆ.ಜಿಗೆ ₹ 60-80 ಇದೆ.ಮುಂದಿನ ಈರುಳ್ಳಿ ಬೆಳೆ ಮಾರುಕಟ್ಟೆಗೆ ಬರುವವರೆಗೂ ಫೆಬ್ರುವರಿವರೆಗೂ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬರುವುದಿಲ್ಲ ಎಂದು ಆಲೂಗಡ್ಡೆ-ಈರುಳ್ಳಿ ವರ್ತಕರ ಸಂಘದ ಸಹ ಕಾರ್ಯದರ್ಶಿ ಪಿ.ಎಸ್. ಶಶಿಧರ್ ಮೂರ್ತಿ ಅವರು ದೂರವಾಣಿ ಮೂಲಕ ಮಾಹಿತಿ ನೀಡಿದರು.

ಎಪಿಎಂಸಿ ಮಾರುಕಟ್ಟೆ ಈರುಳ್ಳಿ

ದೇಶದ ಹಲವು ರಾಜ್ಯಗಳಲ್ಲಿ ಉಂಟಾದ ನೆರೆ ಹಾವಳಿಯೇ ಈರುಳ್ಳಿ ಬೆಲೆ ಏರಿಕೆಗೆ ಕಾರಣ. ಆಗ ರಾಜ್ಯದ ಬಾಗಲಕೋಟೆ, ಗದಗ, ಧಾರವಾಡದ ರೈತರೂ ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದರು. ಫಸಲು ಕೈ ಬಂದಿದ್ದ ವೇಳೆ ವಿಪರೀತ ಮಳೆಯಾಯ್ತು. ಆದ್ದರಿಂದ 100 ಕ್ವಿಂಟಾಲ್ ಬೆಳೆಯಲ್ಲಿ ಕೇವಲ 15-30 ಕೆ.ಜಿ ಈರುಳ್ಳಿ ಸಿಕ್ಕಿತ್ತು. ಹೀಗಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿದೆ ಎಂದು ಅವರು ವಿವರಿಸಿದರು.

ಇಂದು ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಈರುಳ್ಳಿಗೆ ₹ 2000 ರಿಂದ ₹ 8000 ರವರೆಗೂ, ಮಹಾರಾಷ್ಟ್ರದ ಉತ್ತಮ ಗುಣಮಟ್ಟದ ಈರುಳ್ಳಿಗೆ ₹ 8 ಸಾವಿರದಿಂದ ₹ 10,500 ದರದಲ್ಲೂ ಮಾರಾಟವಾಗುತ್ತಿದೆ.

ABOUT THE AUTHOR

...view details