ಬೆಂಗಳೂರು :ರಾಜ್ಯಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಲು ಬಹು ವರ್ಷಗಳಿಂದ ಕಾಯುತ್ತಿದ್ದ ತೃತೀಯ ಲಿಂಗಿಗಳ ಕನಸು ನನಸಾಗಿದೆ. ಇದೀಗ ಕರ್ನಾಟಕದಲ್ಲಿ ಮಂಗಳಮುಖಿಯರಿಗೆ ಶೇ.1ರಷ್ಟು ಮೀಸಲಾತಿ ಕಲ್ಪಿಸಿಲಾಗಿದೆ. ಪೊಲೀಸ್ ಇಲಾಖೆಯು ಮಂಗಳಮುಖಿಯ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.
ಇತ್ತೀಚೆಗೆ ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಶೇ.1ರಷ್ಟು ಮೀಸಲಾತಿ ನೀಡುವಂತೆ ಮಂಗಳಮುಖಿಯರ ಸಮುದಾಯ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯ ತೃತೀಯ ಲಿಂಗಿಗಳ ಬೇಡಿಕೆಗೆ ಅಸ್ತು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಮಂಗಳಮುಖಿಯರಿಗಾಗಿ ರಾಜ್ಯ ಪೊಲೀಸ್ ಇಲಾಖೆ 5 ಹುದ್ದೆಗಳನ್ನು ಮೀಸಲಿರಿಸಿದೆ. ಪೊಲೀಸ್ ಇಲಾಖೆಯ ವಿಶೇಷ ಮೀಸಲು ಪಡೆ (ಕೆಸ್ಆಆರ್ ಮತ್ತು ಐಆರ್ಬಿ) ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅವರು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗೆ ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿಯಿಂದ ಮಂಗಳಮುಖಿ ಎಂಬ ಧೃಡೀಕರಣ ಪತ್ರ ಕಡ್ಡಾಯವಾಗಿದೆ. ಧೃಡೀಕರಣ ಪತ್ರ ನೀಡಿಲ್ಲವಾದಲ್ಲಿ ಅಂತಹ ಅರ್ಜಿ ತಿರಸ್ಕೃತವಾಗಲಿದೆ.