ಬೆಂಗಳೂರು: ಪಾದರಾಯನಪುರದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಬಂದಿದ್ದು, 29 ವರ್ಷದ ಯುವಕನಿಗೆ ಸೋಂಕು ತಗುಲಿದೆ.
ಪಾದರಾಯನಪುರದಲ್ಲಿ ಮತ್ತೊಂದು ಪಾಸಿಟಿವ್ ಕೇಸ್: ನಾಳೆಯಿಂದ 25 ಸಾವಿರ ಮಂದಿ ಪರೀಕ್ಷೆಗೆ ಚಾಲನೆ - Bangalore latest news
ರ್ಯಾಂಡಮ್ ಟೆಸ್ಟ್ನಲ್ಲಿ ಪಾದರಾಯನಪುರದ 29 ವರ್ಷದ ಯುವಕನಿಗೆ ಕೊರೊನಾ ಪಾಸಿಟಿವ್ ಇರುವುದು ತಿಳಿದುಬಂದಿದೆ.
ರ್ಯಾಂಡಮ್ ಟೆಸ್ಟ್ನಲ್ಲಿ ಮತ್ತೊಂದು ಪಾಸಿಟಿವ್ ಪತ್ತೆಯಾಗಿದ್ದು, ಈ ಮೂಲಕ ಪಾದರಾಯನಪುರದಲ್ಲಿ ಸೋಂಕಿತರ ಸಂಖ್ಯೆ 44ಕ್ಕೆ ಏರಿಕೆ ಆಗಿದೆ. ಬೆಂಗಳೂರಿನಲ್ಲಿ ಈವರೆಗೂ 175 ಮಂದಿಗೆ ಸೋಂಕು ತಗಲಿದ್ದು, 86 ಮಂದಿ ಗುಣಮುಖರಾಗಿದ್ದಾರೆ. ಇದರಲ್ಲಿ 82 ಜನ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆಯದ್ದು ಸೇರಿ ಈವರೆಗೆ 7 ಮಂದಿ ಸಾವನ್ನಪ್ಪಿದ್ದಾರೆ.
ಇನ್ನು ನಾಳೆಯಿಂದ ಪಾದರಾಯನಪುರ ವಾರ್ಡ್ನ 25 ಸಾವಿರ ಜನರಿಗೂ ಕೊರೊನಾ ಟೆಸ್ಟ್ ನಡೆಯಲಿದೆ. ಪಾದರಾಯನಪುರದಲ್ಲಿ ಕೊರೊನಾ ಪಾಸಿಟಿವ್ ಹೆಚ್ಚಾದ ಬೆನ್ನಲ್ಲೇ, ಅಕ್ಕ ಪಕ್ಕದ ವಾರ್ಡ್ ಗಳಿಗೂ ತಲೆನೋವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪಾದರಾಯನಪುರ ಸುತ್ತಮುತ್ತಲಿನ 100 ಮೀಟರ್ ಅಂತರದ ವಾರ್ಡ್ಗಳ ಜನರ ಟೆಸ್ಟ್ ಮಾಡಲು ಚಿಂತನೆ ನಡೆದಿದೆ. ಪೈಪ್ ಲೈನ್ ರೋಡ್ , ಟೆಲಿಕಾಂ ರೈಲ್ವೆ ರೋಡ್ ಗಳಲ್ಲೂ ಆಯ್ದ ಕಡೆ ಕೊರೊನಾ ಟೆಸ್ಟ್ ಮಾಡಲು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಮುಂದಾಗಿದೆ.