ಬೆಂಗಳೂರು: ನಗರದ ಮೈಸೂರು ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಸರಣಿ ಅಪಘಾತ ಸಂಭವಿಸಿದೆ. ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಕ್ಯಾಂಟರ್, ಟೆಂಪೋ, ಬಿಎಂಟಿಸಿ ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಬಿಎಂಟಿಸಿ ಬಸ್ ಹಾಗೂ ಟೆಂಪೋ ನಡುವೆ ಆಟೋ ಸಿಲುಕಿ ಸಂಪೂರ್ಣ ಜಖಂಗೊಂಡಿದೆ.
ಬೆಂಗಳೂರು - ಮೈಸೂರು ರಸ್ತೆಯಲ್ಲಿ ಸರಣಿ ಅಪಘಾತ: ಟೆಂಪೋ, ಬಿಎಂಟಿಸಿ ಬಸ್ ನಡುವೆ ಸಿಲುಕಿ ಆಟೋ ಜಖಂ - ಆಟೋ ಜಖಂ
ಬೆಂಗಳೂರು - ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ವಾಹನಗಳ ಮಧ್ಯೆ ಅಪಘಾತ ನಡೆದಿದೆ. ಟೆಂಪೋ, ಆಟೋ, ಬಿಎಂಟಿಸಿ ಬಸ್ ನಡುವೆ ಡಿಕ್ಕಿಯಾಗಿದ್ದು, ಆಟೋ ಜಖಂಗೊಂಡಿದೆ.
road accident
ಅಪಘಾತದ ವೇಳೆ ಆಟೋದಲ್ಲಿ ಸಿಲುಕಿದ್ದ ಚಾಲಕನ ರಕ್ಷಣೆಗೆ ಸ್ಥಳೀಯರು ಅರ್ಧ ಗಂಟೆಯ ಕಾಲ ಹರಸಾಹಸಪಟ್ಟು ಬಳಿಕ ಆಸ್ಪತ್ರೆಗೆ ದಾಖಲಿಸಿದರು. ಚಾಲಕನ ಸ್ಥಿತಿ ಗಂಭೀರವಾಗಿದ್ದು, ಮೈಸೂರು ರಸ್ತೆಯಲ್ಲಿ ಮೂರು ಕಿಲೋಮೀಟರ್ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಬ್ಯಾಟರಾಯನಪುರ ಸಂಚಾರಿ ಠಾಣಾ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇದನ್ನೂ ಓದಿ:ಬರೋಬ್ಬರಿ 117 ಬಾರಿ ರಕ್ತದಾನ ಮಾಡಿ ಗಿನ್ನೆಸ್ ದಾಖಲೆ ಮಾಡಿದ ಮಹಿಳೆ