ನೆಲಮಂಗಲ: ಗ್ಯಾಸ್ ರೀಫಿಲಿಂಗ್ ಮಾಡುವ ಲಾರಿ ವೇಗವಾಗಿ ಬಂದು ಎರಡು ಕೆಎಸ್ಆರ್ಟಿಸಿ ಬಸ್ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪಾದಚಾರಿ ಸಾವನ್ನಪ್ಪಿರುವ ಘಟನೆ ನೆಲಮಂಗಲ ತಾಲೂಕು ಗಡಿ ಭಾಗದ ಸೊಲೂರು ಸರ್ಕಲ್ನಲ್ಲಿ ಕಳೆದ ರಾತ್ರಿ ನಡೆದಿದೆ.
ಎರಡು ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದ ಲಾರಿ : ಪಾದಚಾರಿ ಸಾವು - Nelamangala road accident
ಚಾಲಕನ ಅಜಾಗರೂಕತೆ ಮತ್ತು ವೇಗದ ಚಾಲನೆಯಿಂದ ಲಾರಿಯೊಂದು ಎರಡು ಕೆಎಸ್ಆರ್ಟಿಸಿ ಬಸ್ಗಳಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಪಾದಚಾರಿಯೋರ್ವ ಸಾವನ್ನಪ್ಪಿರುವ ಘಟನೆ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ..
ನೆಲಮಂಗಲ ತಾಲೂಕಿನ ಸೊಲೂರು ಸರ್ಕಲ್ ಬಳಿ ನಡೆದ ಅಪಘಾತ
ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಹೊರಟ್ಟಿದ್ದ ಗ್ಯಾಸ್ ರೀಫಿಲಿಂಗ್ ಲಾರಿ, ಚಾಲಕನ ಅಜಾಗರೂಕತೆ ಮತ್ತು ವೇಗದ ಚಾಲನೆಯಿಂದ ಅರಕಲಗೂಡು ಕಡೆಯಿಂದ ಬೆಂಗಳೂರು ಮಾರ್ಗವಾಗಿ ಬರುತ್ತಿದ್ದ 2 ಕೆಎಸ್ಆರ್ಟಿಸಿ ಬಸ್ಗಳಿಗೆ ಡಿಕ್ಕಿ ಹೊಡೆದಿದೆ. ನಂತರ ಪಾದಚಾರಿಗೆ ಡಿಕ್ಕಿ ಹೊಡೆದು ರಸ್ತೆಯಲ್ಲಿ ಪಲ್ಟಿಯಾಗಿದೆ.
ರಾಜು (65) ಸ್ಥಳದಲ್ಲೇ ಸಾವನ್ನಪ್ಪಿದ ಪಾದಚಾರಿ. ಎರಡು ಬಸ್ಗಳು ಜಖಂ ಆಗಿದ್ದು, ಘಟನೆ ನಂತರ ಚಾಲಕ ಪರಾರಿಯಾಗಿದ್ದಾನೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.