ಕೆ.ಆರ್.ಪುರ (ಬೆಂಗಳೂರು):ನಗರಕ್ಕೆ ಅಕ್ರಮವಾಗಿ ರಕ್ತ ಚಂದನ ತುಂಡುಗಳನ್ನು ತಂದು ಪೊಲೀಸರ ಕಣ್ತಪ್ಪಿಸಿ ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮತ್ತಿಬ್ಬರು ಪರಾರಿಯಾಗಿದ್ದಾರೆ. ಕೆಜಿಎಫ್ನ ಬೇತಮಂಗಲ ಮೂಲದ ಅಬ್ದುಲ್ ರೆಹಮಾನ್ ಬಂಧಿತ ಆರೋಪಿ. ಬಂಧಿತನಿಂದ ಸುಮಾರು 20 ಲಕ್ಷ ರೂ. ಮೌಲ್ಯದ 240 ಕೆ.ಜಿ ತೂಕದ 6 ರೆಡ್ ಸ್ಯಾಂಡಲ್ ತುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಸ್ತೆ ಬದಿ ರಕ್ತಚಂದನ ಮಾರಾಟ: ಆರೋಪಿ ಅಂದರ್, 240 ಕೆಜಿ ರೆಡ್ ಸ್ಯಾಂಡಲ್ ಪೊಲೀಸರ ವಶಕ್ಕೆ!
ರಸ್ತೆ ಬದಿಯಲ್ಲಿ ರಕ್ತ ಚಂದನ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮತ್ತಿಬ್ಬರು ಪರಾರಿಯಾಗಿದ್ದಾರೆ.
ಇದನ್ನೂ ಓದಿ:ಕಡಬ: ಅನ್ಯಮತೀಯ ಯುವಕನಿಂದ ಯುವತಿಗೆ ಲೈಂಗಿಕ ಕಿರುಕುಳ ಆರೋಪ; ಯುವಕ ಅರೆಸ್ಟ್
ಇದೇ 26 ರಂದು ಭಟ್ಟರಹಳ್ಳಿ ಮತ್ತು ಮೇಡಗಳ್ಳಿ ಸರ್ವೀಸ್ ರಸ್ತೆಯಲ್ಲಿ ಅಬ್ದುಲ್ ರೆಹಮಾನ್ ತನ್ನ ಸಹಚರರೊಂದಿಗೆ ರಸ್ತೆ ಬದಿಯಲ್ಲಿ ಸ್ಯಾಂಟ್ರೋ ಕಾರಿನಲ್ಲಿ ರಕ್ತ ಚಂದನವನ್ನು ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿಯೊಂದಿಗೆ ಇನ್ಸ್ಪೆಕ್ಟರ್ ಅಂಬರೀಶ್ ನೇತೃತ್ವದ ತಂಡ ದಾಳಿ ಮಾಡಿದ್ದರು. ದಾಳಿ ವೇಳೆ ಅಬ್ದುಲ್ ರೆಹಮಾನ್ ಸಿಕ್ಕಿಬಿದ್ದಿದ್ದು, ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಬಂಧಿತನ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.