ಬೆಂಗಳೂರು:ದಕ್ಷಿಣ ಆಫಿಕ್ರಾದಿಂದ ಬಂದು ಒಮಿಕ್ರಾನ್ ಸೋಂಕು ದೃಢಪಟ್ಟಿದ್ದ 34 ವರ್ಷ ವಯಸ್ಸಿನ ವ್ಯಕ್ತಿ ಗುಣಮುಖರಾಗಿದ್ದು, ಇಂದು ಬಿಡುಗಡೆಯಾಗಲಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಸೋಂಕಿತ ಡಿ.1 ರಂದು ದಕ್ಷಿಣ ಆಫ್ರಿಕಾದಿಂದ ಆರ್ಟಿ-ಪಿಸಿಆರ್ ನೆಗೆಟಿವ್ (RT-PCR Negative) ವರದಿಯೊಂದಿಗೆ ಪ್ರಯಾಣಿಸಿದ್ದರು. ಅದೇ ದಿನ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಿದಾಗ ನೆಗೆಟಿವ್ ವರದಿ ನೀಡಲಾಗಿತ್ತು.
ಆದರೆ ಮನೆಗೆ ತಲುಪಿದ ಮರು ದಿನ ರೋಗ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತರಾಗಿ ಲ್ಯಾಬ್ಗೆ ಹೋಗಿ ಗಂಟಲು ದ್ರವ ನೀಡಿ ಬಂದಿದ್ದರು. ಈ ವೇಳೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಹೈರಿಸ್ಕ್ ದೇಶದಿಂದ ಬಂದ ಹಿನ್ನೆಲೆ ಸ್ಯಾಂಪಲ್ಸ್ನ್ನು ಜಿನೋಮಿಕ್ ಸೀಕ್ವೆನ್ಸಿಂಗ್ಗೆ ಕಳುಹಿಸಲಾಗಿತ್ತು. ಈ ವೇಳೆ ಒಮಿಕ್ರಾನ್ ಸೋಂಕು ದೃಢಪಟ್ಟಿತ್ತು.