ಬೆಂಗಳೂರು: ಬಿಟ್ಟು ಬಿಡದೇ ಕಾಡುತ್ತಿರುವ ಸಾಂಕ್ರಾಮಿಕ ಕೊರೊನಾ ವೈರಸ್ ಇದೀಗ ರೂಪಾಂತರಿಯಾಗಿ ಜನರನ್ನು ಕಾಡ್ತಿದೆ. ವರ್ಷಗಳು ಕಳೆಯುತ್ತಾ ಬಂದರೂ ಸಾಂಕ್ರಾಮಿಕ ಸೋಂಕು ಜನರನ್ನ ಬಿಟ್ಟಿಲ್ಲ. ಸದ್ಯ ಎರಡನೇ ಅಲೆಯಲ್ಲಿ ಭೀಕರ ಸ್ವರೂಪ ತೋರಿಸಿದ ಡೆಲ್ಟಾ ನಂತರ ಇದೀಗ ಮತ್ತೊಂದು ಸೋಂಕು ಒಮಿಕ್ರಾನ್ ಭಾರತಕ್ಕೆ ಕಾಲಿಟ್ಟಿದೆ. ಕರ್ನಾಟಕದಲ್ಲೇ 66 ಜನರಿಗೆ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ.
ಹೀಗಾಗಿ ಮೂರನೇ ಅಲೆಗೆ ಒಮಿಕ್ರಾನ್ ರೂಪಾಂತರಿಯೇ ಕಾರಣವಾಗಬಹುದು ಅಂತ ತಜ್ಞರು ಅಂದಾಜಿಸಿದ್ದಾರೆ. ಇದೇ ಜನವರಿ ಹಾಗೂ ಫೆಬ್ರವರಿಯಲ್ಲಿ ಮೂರನೇ ಅಲೆ ಎಂಟ್ರಿ ಆಗಬಹುದು ಅಂತ ಆರೋಗ್ಯ ಇಲಾಖೆಗೆ ಎಚ್ಚರಿಕೆಯನ್ನ ನೀಡಿದೆ. ಈಗಾಗಲೇ ದೆಹಲಿ, ಮುಂಬೈ, ಚೆನ್ನೈ ನಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿದ್ದು, ಕರ್ನಾಟಕದಲ್ಲೂ ದಿಢೀರ್ ಸೋಂಕಿತರ ಸಂಖ್ಯೆ ಏರಿಕೆ ಆಗ್ತಿದೆ.
ಡೆಲ್ಟಾಗಿಂತ ಒಮಿಕ್ರಾನ್ ಡೆಂಜರ್: ದೆಹಲಿ ಮಾದರಿ ಆ್ಯಕ್ಷನ್ ಪ್ಲಾನ್ಗೆ ತಜ್ಞರ ಶಿಫಾರಸು - ಡೆಲ್ಟಾಗಿಂತ ಒಮಿಕ್ರಾನ್ ಡೆಂಜರ್
ರಾಜಧಾನಿ ಬೆಂಗಳೂರಿನಲ್ಲಿ 140-200 ರಲ್ಲಿ ಪತ್ತೆಯಾಗ್ತಿದ್ದ ಕೇಸ್ ಗಳು ಇದೀಗ 400-500ಕ್ಕೆ ಜಿಗಿದಿದೆ. ಹೀಗಾಗಿ ಒಮಿಕ್ರಾನ್ ಕುರಿತು ನಿರ್ಲಕ್ಷ್ಯ ಬೇಡ. ದೆಹಲಿ ಮಾದರಿಯ ಮೂರನೇ ಅಲೆಯ ಆಕ್ಷನ್ ಪ್ಲಾನ್ ಗೆ ರೆಡಿಯಾಗಿ ಅಂತಿದ್ದಾರೆ ತಜ್ಞರು.
ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ 140-200 ರಲ್ಲಿ ಪತ್ತೆಯಾಗ್ತಿದ್ದ ಕೇಸ್ ಗಳು ಇದೀಗ 400-500ಕ್ಕೆ ಜಿಗಿದಿದೆ. ಹೀಗಾಗಿ ಒಮಿಕ್ರಾನ್ ಕುರಿತು ನಿರ್ಲಕ್ಷ್ಯ ಬೇಡ. ದೆಹಲಿ ಮಾದರಿಯ ಮೂರನೇ ಅಲೆಯ ಆಕ್ಷನ್ ಪ್ಲಾನ್ ಗೆ ರೆಡಿಯಾಗಿ ಅಂತಿದ್ದಾರೆ..
ಇದಕ್ಕಾಗಿ, ಮೂರು ಕೋಡ್ ಇಟ್ಟಕೊಂಡು ಇದರಿಂದ ಯಾವ ಯಾವ ಚಟುವಟಿಕೆಗಳಿಗೆ ನಿರ್ಬಂಧ ಯಾವಾಗಾ ಹೇರಬೇಕು ಎಂಬುದನ್ನ ನಿರ್ಧರಿಸುವಂತೆ ಸೂಚಿಸಲಾಗಿದೆ. ಕೋವಿಡ್ ಪಾಸಿಟಿವ್ ರೇಟ್ ಶೇ. 1ರಷ್ಟು ಕಡಿಮೆ ಇದ್ದರೆ ಯೆಲ್ಲೋ ಅರ್ಲಟ್, 1ರಿಂದ 2ರಷ್ಟು ಇದ್ದರೆ ಆರೆಂಜ್ ಹಾಗೂ 2ಕ್ಕಿಂತ ಹೆಚ್ಚು ಇದ್ದರೆ ರೆಡ್ ಅಲರ್ಟ್ ಎಂದು ಚಟುವಟಿಕೆಗಳಲ್ಲಿ ನಿರ್ಬಂಧಗಳನ್ನು ಹೇರಲು ಬಳಸಲು ಸೂಚಿಸಲಾಗಿದೆ. ಇದೇ ಮಾದರಿಯನ್ನ ಪಕ್ಕದ ದೆಹಲಿಯಲ್ಲೂ ಅನುಸರಿಸಲಾಗ್ತಿದೆ.
ತಾಂತ್ರಿಕ ಸಲಹಾ ಸಮಿತಿ ತಜ್ಞರ ಶಿಫಾರಸುಗಳು ಏನು?
- ಡೆಲ್ಟಾದ ಕಾರಣದಿಂದ ಎರಡನೇ ಅಲೆಯ ತೀವ್ರತೆಯನ್ನ ಎದುರಿಸಬೇಕಾಯ್ತು. ಇದೀಗ ಡೆಲ್ಟಾ ಗಿಂದ ಒಮಿಕ್ರಾನ್ ರೂಪಾಂತರಿ ಹೆಚ್ಚು ಸಾಂಕ್ರಾಮಿಕ ಎಂದು ತಿಳಿದಿರುವುದರಿಂದ, ಕಟ್ಟುನಿಟ್ಟಿನ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.
- ಇನ್ನು ಕೋವಿಡ್ ಪರೀಕ್ಷೆಯನ್ನ ನಿತ್ಯಾ 75,000 ಆರ್ ಟಿಪಿಸಿಆರ್ ಹಾಗೂ RAT ಮೂಲಕ ಶೇ. 30 ರಷ್ಟು ಮಾಡಬೇಕು
- ಕ್ಲಸ್ಟರ್‌ಗಳಿಂದ ಶೇ. 30 ಎಲ್ಲ ಮಾದರಿಗಳನ್ನ ಕಡ್ಡಾಯವಾಗಿ ಜಿನೋಮ್ ಸೀಕ್ವೇನ್ಸಿಂಗ್ ಕಳುಹಿಸುವುದು
- ಎಲ್ಲಾ ವಸತಿ ಶಾಲೆಗಳು, ಹಾಸ್ಟೆಲ್‌ಗಳು, ಅಪಾರ್ಟ್‌ಮೆಂಟ್‌ಗಳು, ಮಾಲ್‌ಗಳು ಮತ್ತು ಜನಸಂದಣಿ ಇರುವ ಇತರ ಸ್ಥಳಗಳಲ್ಲಿ ಕೋವಿಡ್ ನಿಯಮ ಪಾಲಿಸಬೇಕು
- ಇನ್ನು ಸರಿಯಾಗಿ ಎಸ್ ಒಪಿ ಜಾರಿಯಾಗಿದ್ದಯಾ ಎಂಬುದನ್ನ ಪರಿಶೀಲಿಸಲು ಮಾರ್ಷಲ್‌ಗಳ ಮತ್ತು ಪೊಲೀಸ್ ಸಹಾಯ ಪಡೆಯುವುದು
ಆಸ್ಪತ್ರೆಗಳು ಸಜ್ಜಾಗಿ ಇರಲಿ
ಒಮಿಕ್ರಾನ್ ಪ್ರಮುಖವಾಗಿ ಬಹುಬೇಗ ಅಂದರೆ ಈ ಹಿಂದಿನ ವೈರಸ್ ಗಿಂತ 100 ಪಟ್ಟು ಹೆಚ್ಚು ಹರಡಬಲ್ಲದು.. ಬಹುಬೇಗ ಆಕ್ರಮಣಕಾರಿಯಾಗಿ ಇರುವುದಿರಂದ ತಾಂತ್ರಿಕ ಸಲಹ ಸಮಿತಿಯು ಮೊದಲು ಆಸ್ಪತ್ರೆಗಳು ಸಜ್ಜಾಗಿ ಇರಲಿ ಅಂತ ತಿಳಿಸಿದೆ. ಆಸ್ಪತ್ರೆಗೆ ಬೇಕಾಗುವ ಸೌಲಭ್ಯಗಳು, ಔಷಧ ಹಾಗೂ ಉಪಕರಣಗಳ ಸರಬರಾಜು ಮತ್ತು ತರಬೇತಿ ಪಡೆದಿರುವ ಸಿಬ್ಬಂದಿಗಳ ನಿಯೋಜನೆಗೆ ತಿಳಿಸಿದೆ.
ಹೋಂ ಐಸೋಲೇಷನ್
ಇನ್ನೂ ಒಮಿಕ್ರಾನ್ ಸೋಂಕಿತರಿಗೆ ಅದರಲ್ಲೂ ಸೌಮ್ಯ ರೋಗದ ಲಕ್ಷಣಗಳನ್ನ ಹೊಂದಿದ್ದರೆ ಅಂತವರೂ ಹೋಂ ಐಸೋಲೇಷನ್ ಆಯ್ಕೆ ಮಾಡಿ
ಕೊಳ್ಳಬಹುದು. ಆದರೆ, ಇದಕ್ಕೆ ಅನುಮತಿ ನೀಡುವ ಮೊದಲು ಎಲ್ಲ ರೀತಿಯ ಸೌಲಭ್ಯಗಳು ಇದ್ಯಾ ಎಂಬುದನ್ನ ಪರಿಶೀಲಿಸಬೇಕು. ಒಬ್ಬರು ಆರೈಕೆ ಮಾಡುವವರು ಇರಲಿದ್ದು ಉಳಿದಂತೆ ಟೆಲಿ ಮಾನಿಟರ್ ಮಾಡುತ್ತಲಿರಬೇಕು ಎಂದು ತಿಳಿಸಿದ್ದಾರೆ.
ಒಮಿಕ್ರಾನ್ ಸೌಮ್ಯವಾಗಿದ್ದು, ಹೆಚ್ಚಿನವರಿಗೆ ಆಸ್ಪತ್ರೆಯ ಹಾಸಿಗೆಗಳ ಅಗತ್ಯವಿರುವುದಿಲ್ಲ. ಇತ್ತ ಹೋಂ ಐಸೋಲೇಷನ್ ಗೆ ಅನೇಕರು ಮನೆಯಲ್ಲಿ ಸೌಲಭ್ಯಗಳ ಕೊರತೆಯಿದ್ದಾಗ ಕೋವಿಡ್ ಕೇರ್ ಸೆಂಟರ್ ಹೋಗಲು ಬಯಸುತ್ತಾರೆ.. ಹೀಗಾಗಿ, ಉತ್ತಮವಾಗಿರುವ CCC ಸಿದ್ಧಪಡಿಸುವಂತೆಯೂ ಸೂಚಿಸಲಾಗಿದೆ.. ಇದರಿಂದ ಆಸ್ಪತ್ರೆಗಳ ದಟ್ಟಣೆ ನಿವಾರಿಸಲಿದೆ ಎಂಬುದು ತಜ್ಞರ ಆಶಯ.
TAGGED:
ಡೆಲ್ಟಾಗಿಂತ ಒಮಿಕ್ರಾನ್ ಡೆಂಜರ್