ಕರ್ನಾಟಕ

karnataka

ETV Bharat / city

ಮತ್ತೊಂದು ಒಮಿಕ್ರಾನ್ ಕೇಸ್​ ಪತ್ತೆ: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆ

ಇಂದು ಕರ್ನಾಟಕದಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ಸೋಂಕಿತ ವ್ಯಕ್ತಿ ಬೆಂಗಳೂರಿನ ಬೊಮ್ಮನಹಳ್ಳಿ ನಿವಾಸಿ ಎಂದು ತಿಳಿದುಬಂದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Omicron
Omicron

By

Published : Dec 12, 2021, 2:14 PM IST

Updated : Dec 12, 2021, 2:26 PM IST

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಒಮಿಕ್ರಾನ್ ರೂಪಾಂತರಿ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಮಿಕ್ರಾನ್​ ಸೋಂಕಿತರ ಸಂಖ್ಯೆ 36ಕ್ಕೆ ತಲುಪಿದೆ.

ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ 34 ವರ್ಷದ ವ್ಯಕ್ತಿಗೆ ಕೋವಿಡ್​ ಪಾಸಿಟಿವ್ ದೃಢಪಟ್ಟಿತ್ತು. ಅವರ ಸ್ಯಾಂಪಲ್​ ಅನ್ನ ಜಿನೋಮಿಕ್ ಸೀಕ್ವೆನ್ಸಿಂಗ್​ಗೆ ಕಳುಹಿಸಿದಾಗ ಒಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಒಮಿಕ್ರಾನ್ ಸೋಂಕಿತ ವ್ಯಕ್ತಿ ಬೆಂಗಳೂರಿನ ಬೊಮ್ಮನಹಳ್ಳಿ ನಿವಾಸಿ ಎಂದು ತಿಳಿದುಬಂದಿದೆ. ಸದ್ಯಕ್ಕೆ ಸೋಂಕಿತ ವ್ಯಕ್ತಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಐವರು ಮತ್ತು 15 ಮಂದಿ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದ್ದು, ಅವರ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಟ್ವೀಟ್​ ಮಾಡಿದ್ದಾರೆ.

ರಾಜ್ಯವಾರು ಒಮಿಕ್ರಾನ್ ಪ್ರಕರಣಗಳ ಮಾಹಿತಿ:

  • ಕರ್ನಾಟಕ - 3
  • ಮಹಾರಾಷ್ಟ್ರ- 17
  • ರಾಜಸ್ಥಾನ - 9
  • ಗುಜರಾತ್‌ - 3
  • ಆಂಧ್ರಪ್ರದೇಶ -1
  • ನವದೆಹಲಿ- 2 ಸೇರಿದಂತೆ ಒಟ್ಟು ದೇಶದಲ್ಲಿ 36 ಪ್ರಕರಣಗಳು ದೃಢಪಟ್ಟಿವೆ.
Last Updated : Dec 12, 2021, 2:26 PM IST

ABOUT THE AUTHOR

...view details