ದೇವನಹಳ್ಳಿ : ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪಿಂಚಣಿ ಹಣಕ್ಕಾಗಿ ಅಂಚೆ ಕಚೇರಿಯ ಮುಂದೆ ವೃದ್ಧ ಮಹಿಳೆಯರು ಸಂಕಟ ತೋಡಿಕೊಂಡರು.
'ಕೈಯಲ್ಲಿ ಹಣವಿಲ್ಲ, ನಮ್ಮನ್ನು ನೋಡಿಕೊಳ್ಳುವವರೂ ಇಲ್ಲ': ಪಿಂಚಣಿ ಹಣಕ್ಕಾಗಿ ಹಿರಿಜೀವಗಳ ಅಲೆದಾಟ
ದೇವನಹಳ್ಳಿಯ ವೃದ್ಧ ಮಹಿಳೆಯರು ಕಳೆದ ಮೂರು ತಿಂಗಳಿನಿಂದ ವೃದ್ಧಾಪ್ಯ ವೇತನಕ್ಕಾಗಿ ಅಂಚೆ ಕಚೇರಿಗೆ ಅಲೆದಾಡುವಂತಾಗಿದೆ.
ವೃದ್ಧಾಪ್ಯ ವೇತನ
ಈ ಹಿಂದೆ ಮನೆ ಬಾಗಿಲಿಗೆ ಪೋಸ್ಟ್ ಮ್ಯಾನ್ ವೇತನವನ್ನು ತಂದು ಕೊಡುತ್ತಿದ್ದ. ಆದರೀಗ ಅಂಚೆಯಣ್ಣ ಬಾರದ ಕಾರಣ ಮೂರ್ನಾಲ್ಕು ಕಿ.ಮೀ ದೂರದಿಂದ ನಡೆದುಕೊಂಡು ಕಚೇರಿಗೆ ಬರುತ್ತಿದ್ದೇವೆ ಅನ್ನೋದು ಹಿರಿಜೀವಗಳ ಸಂಕಟ.
ದಿನಬಳಕೆ ವಸ್ತು ಖರೀದಿಸಲು ಕೈಯಲ್ಲಿ ಹಣವಿಲ್ಲ, ಇತ್ತ ನಮ್ಮನ್ನು ನೋಡಿಕೊಳ್ಳುವವರಿಲ್ಲ. ಪೆನ್ಷನ್ ಹಣವೂ ಬಂದಿಲ್ಲ ಅಂತ ಮಹಿಳೆಯರು ನೋವು ತaಡಿಕೊಂಡರು.