ಬೆಂಗಳೂರು : ನಗರದಲ್ಲಿ ಒಂಟಿಯಾಗಿ ವಾಸವಿದ್ದ ವೃದ್ಧೆವೋರ್ವರಿಗೆ ಕೊರೊನಾ ಸೋಂಕು ತಗುಲಿದ್ದು, ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಲು ಯಾರೂ ಇಲ್ಲದೇ ಮೃತಪಟ್ಟಿರುವ ಘಟನೆ ಜೆ ಸಿ ನಗರದಲ್ಲಿ ನಡೆದಿದೆ.
ಮಲಗಿದ್ದಲ್ಲೇ ಹಾರಿಹೋಯ್ತು ಪ್ರಾಣ.. ಆರೈಕೆಗೆ ಯಾರೂ ಇಲ್ಲದೆ ಅನಾಥ ಶವವಾದ ಕೊರೊನಾ ಸೋಂಕಿತೆ - Old woman died due to no treatment
ಬೆಂಗಳೂರಿನ ಶಂಕರಮಠ ವಾರ್ಡ್‌ನ ಜೆ.ಸಿ. ನಗರದಲ್ಲಿ 70 ವರ್ಷದ ಒಂಟಿ ಮಹಿಳೆ ವಾಸವಾಗಿದ್ದರು. ಕೋವಿಡ್-19ಸೋಂಕು ಇವರಿಗೆ ತಗುಲಿದ್ದು, ಸಕಾಲಕ್ಕೆ ಚಿಕಿತ್ಸೆ ಪಡೆಯಲಾಗದೇ ಹಾಗೂ ಆ ವೃದ್ಧೆಗೆ ಕುಟುಂಬದವರು ಯಾರೂ ಇಲ್ಲದ ಕಾರಣದಿಂದ ಮನೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಸಾವು
ಶಂಕರಮಠ ವಾರ್ಡ್‌ನ ಜೆ.ಸಿ.ನಗರದಲ್ಲಿ 70 ವರ್ಷದ ಒಂಟಿ ವೃದ್ಧೆ ವಾಸವಾಗಿದ್ದರು. ಕೋವಿಡ್-19 ಸೋಂಕು ಇವರಿಗೆ ತಗುಲಿದ್ದು, ಸಕಾಲಕ್ಕೆ ಚಿಕಿತ್ಸೆ ಪಡೆಯಲಾಗದೇ ಹಾಗೂ ಅವರಿಗೆ ಯಾರೂ ಇಲ್ಲದ ಕಾರಣದಿಂದ ಮನೆಯಲ್ಲಿ ಮಲಗಿದ್ದ ಜಾಗದಲ್ಲೇ ಉಸಿರು ಚೆಲ್ಲಿದ್ದಾರೆ.
ಈ ವಿಷಯ ತಿಳಿದ ಸ್ಥಳೀಯ ನಿವಾಸಿಗಳು ಮಾಜಿ ಆಡಳಿತ ಪಕ್ಷದ ನಾಯಕ ಎಮ್. ಶಿವರಾಜು ಗಮನಕ್ಕೆ ತಂದಿದ್ದು, ಕೂಡಲೇ ಆ್ಯಂಬುಲೆನ್ಸ್ ಮತ್ತು ಸ್ವಯಂ ಸೇವಕರ ನೆರವಿನೊಂದಿಗೆ ಕೊರೊನಾ ನಿಯಮಾವಳಿ ಅನ್ವಯ ತಪಾಸಣೆ ನಡೆಸಿ ಅಂತಿಮ ಸಂಸ್ಕಾರಕ್ಕೆ ನೆರವು ನೀಡಲಾಯಿತು.
Last Updated : Apr 26, 2021, 7:40 PM IST