ಕರ್ನಾಟಕ

karnataka

ETV Bharat / city

ಬೆಂಗಳೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ... 15ಕ್ಕೇರಿದ ಮೃತರ ಸಂಖ್ಯೆ - Old woman died in Bangalore due to Corona

ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ 65 ವರ್ಷದ ಕೊರೊನಾ ಸೋಂಕಿತ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆಂದು ಬಿಬಿಎಂಪಿಯ ಸಿಹೆಚ್ಒ ಮಾಹಿತಿ ನೀಡಿದ್ದಾರೆ.‌

ಕೊರೊನಾ
ಕೊರೊನಾ

By

Published : Apr 19, 2020, 4:26 PM IST

ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಇಂದು ರಾಜ್ಯ ರಾಜಧಾನಿಯಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದೆ.

ಬೆಂಗಳೂರಿನ ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ 65 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆಂದು ಬಿಬಿಎಂಪಿಯ ಸಿಹೆಚ್ಒ ಮಾಹಿತಿ ನೀಡಿದ್ದಾರೆ.‌ ರೋಗಿ ಸಂಖ್ಯೆ 281 ಮಹಿಳೆ ಮೃತಪಟ್ಟಿದ್ದಾರೆ. ಇವರು ತೀವ್ರ ಉಸಿರಾಟದಿಂದ‌ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಏಪ್ರಿಲ್ 16 ರಂದು ಸೋಂಕು‌ ದೃಢಪಟ್ಟಿತ್ತು. ಅವರನ್ನು ಬೆಂಗಳೂರಿನ‌ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಮೃತರ ಸಂಖ್ಯೆ 4 ಕ್ಕೆ ಏರಿದ್ದು, ರಾಜ್ಯದಲ್ಲಿ 15ನೇ ಸಾವು ಸಂಭವಿಸಿದೆ.

ABOUT THE AUTHOR

...view details