ಕರ್ನಾಟಕ

karnataka

By

Published : Dec 15, 2021, 10:55 PM IST

ETV Bharat / city

ಒಕ್ಕಲಿಗರ ಸಂಘದ ಚುನಾವಣೆ: ಮತ ಎಣಿಕೆ ವೇಳೆ ಅಭ್ಯರ್ಥಿ, ಬೆಂಬಲಿಗರ ಮಧ್ಯೆ ಹೊಡೆದಾಟ

ಒಕ್ಕಲಿಗರ ಸಂಘದ ಚುನಾವಣೆ ಮತ ಎಣಿಕೆಯಲ್ಲಿ ಭಾರೀ ಗೊಂದಲ ಉಂಟಾಗಿ, ಅಭ್ಯರ್ಥಿಗಳು ಮತ್ತು ಬೆಂಬಲಿಗರ ಮಧ್ಯೆ ಹೊಡೆದಾಟ ನಡೆದಿದೆ.

election
ಒಕ್ಕಲಿಗರ ಸಂಘದ ಚುನಾವಣೆ

ಬೆಂಗಳೂರು:ಒಕ್ಕಲಿಗರ ಸಂಘದ ಚುನಾವಣೆ ಮತ ಎಣಿಕೆಯಲ್ಲಿ ಭಾರಿ ಗೊಂದಲ ಉಂಟಾಗಿ, ಅಭ್ಯರ್ಥಿಗಳು ಮತ್ತು ಬೆಂಬಲಿಗರ ಮಧ್ಯೆ ಹೊಡೆದಾಟ ನಡೆದಿದೆ.

ಒಕ್ಕಲಿಗರ ಸಂಘದ ಚುನಾವಣೆ ಗೊಂದಲ

ಒಕ್ಕಲಿಗರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಇಂದು ಮತ ಎಣಿಕೆ ಕಾರ್ಯ ನಡೆದಿತ್ತು. ಈ ವೇಳೆ, ಬೂತ್​ಗಳಲ್ಲಿ ಮತ ಎಣಿಕೆ ವೇಳೆ ಗೊಂದಲ ಉಂಟಾಗಿದೆ. ಇದನ್ನು ಮರು ಎಣಿಕೆ ಮಾಡಬೇಕು ಎಂದು ಸತೀಶ್​ ಕಡ್ತಲ ಮನೆ ಎಂಬ ಅಭ್ಯರ್ಥಿ ಮತ್ತು ಅವರ ಬೆಂಬಲಿಗರು ಆಗ್ರಹಿಸಿದ್ದಾರೆ.

ಗೊಂದಲ ಉಂಟಾದ ಬೂತ್​ಗಳಲ್ಲಿ ಮರು ಮತ ಎಣಿಕೆಗೆ ಚುನಾವಣಾ ಅಧಿಕಾರಿ ರವೀಂದ್ರ ಆದೇಶಿಸಿದ್ದಾರೆ. ಈ ವೇಳೆ, ಅಭ್ಯರ್ಥಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಅಲ್ಲದೇ ವಾಗ್ವಾದ ತೀವ್ರವಾಗಿ ಬೆಂಬಲಿಗರು ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಿಗರೇಟ್​ ಸೇದಿದ ತಮ್ಮನಿಗೆ ದಂಡ ಹಾಕಿದ ಟಿಟಿ.. ರೈಲು ಬ್ಲಾಸ್ಟ್​ ಬೆದರಿಕೆ ಹಾಕಿದ ಅಣ್ಣ!

ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ. ಅಲ್ಲದೇ ಎರಡೂ ಬಣಗಳ ಮಧ್ಯೆ ಸಂಧಾನ ಮಾಡಿದ್ದಾರೆ. ಅಲ್ಲದೇ, ಎಣಿಕೆಗೆ ಅಡ್ಡಿಯಾದ ಕೆಲವರನ್ನು ಮತ ಎಣಿಕೆ ಕೇಂದ್ರದಿಂದ ಪೊಲೀಸರು ಹೊರ ಹಾಕಿದ್ದಾರೆ.

ABOUT THE AUTHOR

...view details