ಕರ್ನಾಟಕ

karnataka

ETV Bharat / city

ಕನ್ನಡಿಗರಿಂದ ಕನ್ನಡಿಗರಿಗಾಗಿ ; 'OK ಓನ್ಲಿ ಕನ್ನಡ' ಓಟಿಟಿ ಪ್ಲಾಟ್​ಫಾರ್ಮ್ - ಬೆಂಗಳೂರು ಸುದ್ದಿ

OK ಓನ್ಲಿ ಕನ್ನಡ ಎಂಬ ಆನ್​ಲೈನ್​ ಪ್ಲಾಟ್​ಫಾರ್ಮ್ ಕನ್ನಡಿಗರ ಮನೆ ಹಾಗೂ ಮನಗಳನ್ನು ತಲುಪಲು ಸಿದ್ಧವಾಗುತ್ತಿದೆ. ಶೀಘ್ರದಲ್ಲೇ ಡಿಜಿಟಲ್ ಲೋಕಕ್ಕೆ ಎಂಟ್ರಿ ಕೊಡಲಿದೆ. ಇದರ ಮೂಲಕ ನೀವು ಬಣ್ಣದ ಲೋಕವನ್ನು ನಿಮ್ಮ ಅಂಗೈಯಲ್ಲೇ ಹಿಡಿದು ನೋಡಬಹುದಾಗಿದೆ..

'OK only kannada' online platform
OK ಓನ್ಲಿ ಕನ್ನಡ

By

Published : Jul 19, 2020, 7:41 PM IST

ಈಗ ಎಲ್ಲವೂ ಡಿಜಿಟಲ್​ಮಯ. ಆನ್​ಲೈನ್ ಕ್ಲಾಸ್, ಆನ್​ಲೈನ್ ಫುಡ್ ಡೆಲಿವರಿ ಸೇರಿದಂತೆ ಆನ್​ಲೈನ್​ನಲ್ಲೇ ತರಕಾರಿ ಕೂಡ ಆರ್ಡರ್ ಮಾಡೋ ಟೆಕ್ನಾಲಜಿ ಬಂದಿದೆ.

ಮನರಂಜನೆಯ ವಿಷಯಕ್ಕೆ ಬಂದ್ರೂ ಈಗ ಕೂತಲ್ಲೇ ಹೊಸ ಸಿನಿಮಾ ನೋಡುವ ಒಟಿಟಿ ಪ್ಲಾಟ್​ಫಾರ್ಮ್ ಟ್ರೆಂಡ್​ನಲ್ಲಿದೆ. ಅದರಲ್ಲೂ ಕೊರೊನಾ ಬಂದು ಥಿಯೇಟರ್ ಬಂದ್ ಆದ ಮೇಲೆ ಒಟಿಟಿ ಪ್ಲಾಟ್​ಫಾರ್ಮ್​ಗೆ ರಹದಾರಿ ಸಿಕ್ಕಂತಾಗಿದೆ. ಇದನ್ನು ಅರಿತ ಕನ್ನಡಿಗರ ತಂಡವೊಂದು ಲಾಕ್​ಡೌನ್ ಸಂದರ್ಭದಲ್ಲಿ ಪಕ್ಕಾ ಪ್ಲಾನ್ ಮಾಡಿ, ಕನ್ನಡಿಗರಿಂದ ಕನ್ನಡಿಗರಿಗಾಗಿ ಎಂಬ ಕಾನ್ಸೆಪ್ಟ್​ನಲ್ಲಿ'Ok ಓನ್ಲಿ ಕನ್ನಡ' ಎಂಬ ಆನ್​ಲೈನ್ ಪ್ಲಾಟ್​ಫಾರ್ಮ್ ಒಪನ್ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದೆ.

OK ಓನ್ಲಿ ಕನ್ನಡ

ಕನ್ನಡದವರೇ ಆದ ಪ್ರಯೋಗ್ ಸ್ಟುಡಿಯೋ ಹಾಗೂ ಮಯೂರ ಮೋಷನ್ ಪಿಕ್ಚರ್ಸ್ ಅವರ ಸಹಭಾಗಿತ್ವದಲ್ಲಿ 'Ok ಓನ್ಲಿ ಕನ್ನಡ' ಆನ್​ಲೈನ್ ಪ್ಲಾಟ್​ಫಾರ್ಮ್ ನಿರ್ಮಾಣಗೊಂಡಿದೆ.

ಶೀಘ್ರದಲ್ಲೇ ಡಿಜಿಟಲ್ ಲೋಕಕ್ಕೆ ಎಂಟ್ರಿ ಕೊಡಲಿದೆ 'OK ಓನ್ಲಿ ಕನ್ನಡ'

ಈ ಒಟಿಟಿ ಫ್ಲಾಟ್​ಫಾರ್ಮ್​ನ ವಿಶೇಷ ಅಂದ್ರೆ, ಕನ್ನಡ ಚಿತ್ರಗಳನ್ನು ಮಾತ್ರ ಬಿಡುಗಡೆ ಮಾಡುವ ಉದ್ದೇಶದಿಂದ ಇದನ್ನು ನಿರ್ಮಾಣ ಮಾಡಿದ್ದು, ಕನ್ನಡದ ಚಿತ್ರಗಳು, ನಾಟಕ ಹಾಗೂ ಕಿರು ಚಿತ್ರಗಳನ್ನು ರಿಲೀಸ್ ಮಾಡಿ ಇಲ್ಲಿರುವ ಕನ್ನಡಿಗರಿಗೆ ಮನರಂಜನೆ ನೀಡುವ ಜೊತೆಗೆ ವಿದೇಶದಲ್ಲಿರುವ ಕನ್ನಡಿಗರಿಗೂ ಇದನ್ನು ತಲುಪಿಸುವ ಉದ್ದೇಶ ಇವರದ್ದಾಗಿದೆ.

ಇದರ ಜೊತೆಗೆ ಸಾಕಷ್ಟು ಕನ್ನಡ ಕಿರುಚಿತ್ರ, ಚಲನಚಿತ್ರ ಹಾಗೂ ನಾಟಕಗಳನ್ನು ನಿರ್ಮಾಣ ಮಾಡಲು ಇವರು ಹೊಸ ತಂಡಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. OK ಓನ್ಲಿ ಕನ್ನಡ ಕನ್ನಡಿಗರ ಮನೆ ಹಾಗೂ ಮನಗಳನ್ನು ತಲುಪಲು ಸಿದ್ಧವಾಗುತ್ತಿದ್ದು, ಶೀಘ್ರದಲ್ಲೇ ಡಿಜಿಟಲ್ ಲೋಕಕ್ಕೆ ಎಂಟ್ರಿ ಕೊಡಲಿದೆ.

ABOUT THE AUTHOR

...view details