ಬೆಂಗಳೂರು: ತೆರಿಗೆ ಕಟ್ಟದೆ ಕೋಟ್ಯಂತರ ರೂ. ಬೆಲೆ ಬಾಳುವ ಚಿನ್ನಾಭರಣ ಸಾಗಿಸುತ್ತಿದ್ದ ಜ್ಯುವೆಲ್ಲರಿ ಶಾಪ್ಗೆ ಬೆಂಗಳೂರು ವಿಭಾಗದ ಜಿಎಸ್ಟಿ ಅಧಿಕಾರಿಗಳು 64 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.
ಜ್ಯುವೆಲ್ಲರಿ ಶಾಪ್ ಮಾಲೀಕನಿಗೆ 64 ಲಕ್ಷ ರೂ. ದಂಡ ವಿಧಿಸಿದ ಅಧಿಕಾರಿಗಳು: ಯಾಕೆ ಗೊತ್ತೇ?
ತೆರಿಗೆ ಉಳಿಸಲು ವಾಮಮಾರ್ಗದ ಮೂಲಕ ಕೋಟ್ಯಂತರ ರೂ. ಮೌಲ್ಯದ ಚಿನ್ನ ಸಾಗಿಸಿದ್ದ ಜ್ಯುವೆಲ್ಲರಿ ಶಾಪ್ ಮಾಲೀಕನಿಗೆ ಜಿಎಸ್ಟಿ ಅಧಿಕಾರಿಗಳು 64 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.
ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಬೈಕ್ನಲ್ಲಿ ಇಬ್ಬರು ಚಿನ್ನ ಸಾಗಾಟ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕೋಟ್ಯಂತರ ರೂ. ಮೌಲ್ಯದ 6.5 ಕೆ.ಜಿ ಚಿನ್ನಾಭರಣ ಪತ್ತೆಯಾಗಿತ್ತು. ಎಸ್.ಎಸ್. ಜ್ಯುವೆಲ್ಲರಿ ಶಾಪ್ಗೆ ಸೇರಿದ ಚಿನ್ನಾಭರಣ ಎಂದು ತನಿಖೆ ವೇಳೆ ತಿಳಿದುಬಂದಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳಿಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದರು. ಬಳಿಕ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ವಹಿಸಲಾಗಿತ್ತು. ತನಿಖೆ ವೇಳೆ ಸರಬರಾಜು ಮಾಡಿದ್ದ ಮಾಲುಗಳಿಗೆ ಯಾವುದೇ ತೆರಿಗೆ ಪಾವತಿಸಿರಲಿಲ್ಲ. ತೆರಿಗೆ ಹಣ ಉಳಿಸುವ ದೃಷ್ಟಿಯಿಂದ ಜ್ಯುವೆಲ್ಲರಿ ಮಾಲೀಕರು ವಾಮಮಾರ್ಗ ಬಳಸಿ, ತೆರಿಗೆ ವಂಚಿಸಿರುವುದು ಸಾಬೀತಾದ ಹಿನ್ನೆಲೆ ಜಿಎಸ್ಟಿ ಅಧಿಕಾರಿಗಳು 64.27 ಲಕ್ಷ ರೂ.ದಂಡ ವಸೂಲಿ ಮಾಡಿಕೊಂಡಿದ್ದಾರೆ.