ಕರ್ನಾಟಕ

karnataka

ETV Bharat / city

ಸಿಲಿಕಾನ್ ಸಿಟಿಯಲ್ಲಿ ಸೈಬರ್​​​ ಅಪರಾಧ ಹೆಚ್ಚಳ: ಸಂದೀಪ್​ ಪಾಟೀಲ್​ - ಬ್ಯಾಂಕ್ ನಂಬರ್, ಎಟಿಎಂ ನಂಬrf ಶೇರ್‌ಮಾಡಬಾರದು

ಸಿಲಿಕಾನ್ ಸಿಟಿಯಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಹೀಗಾಗಿ ನಗರ ಪೊಲೀಸರು ಕೂಡ ಸೈಬರ್ ಅಪರಾಧ ತಡೆಗಟ್ಟಲು ಬಹಳಷ್ಟು ಯೋಜನೆಗಳನ್ನ ಮಾಡ್ತಿದ್ದಾರೆ‌.

KN_BNG_06_SANDEEP_PATTEL_7204498
ಸಿಲಿಕಾನ್ ಸಿಟಿಯಲ್ಲಿ ಸೈಬರ್ ಅಪರಾಧ ಹೆಚ್ಚಳ: ಸಂದೀಪ್ ಪಾಟೀಲ್

By

Published : Dec 17, 2019, 9:44 AM IST

ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಹೀಗಾಗಿ ನಗರ ಪೊಲೀಸರು ಕೂಡ ಸೈಬರ್ ಅಪರಾಧ ತಡೆಗಟ್ಟಲು ಬಹಳಷ್ಟು ಯೋಜನೆಗಳನ್ನ ಮಾಡ್ತಿದ್ದಾರೆ‌.

ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್, ಪೊಲೀಸ್ ಇಲಾಖೆಯಿಂದ ಕೆಲವೊಂದು ಕ್ರಮ ಕೈಗೊಳ್ಳಲಾಗಿದೆ. ಪೊಲೀಸರು ಅಲರ್ಟ್ ಆಗಿದ್ರೆ ಸಾಲದು, ಸಾರ್ವಜನಿಕರಲ್ಲೂ ಕೂಡ ಸೈಬರ್ ಅಪರಾಧದ ಬಗ್ಗೆ ಜಾಗೃತಿ ಬೇಕು ಎಂದರು. ಹೆಚ್ಚಾಗಿ ಲಾಟರಿ ಸ್ಕ್ಯಾಮ್​​​, ಜಾಬ್ ಫ್ರಾಡ್, ಮ್ಯಾಟ್ರಿ ಮೋನಿಯಲ್, ಆನ್‌ಲೈನ್ ಶಾಪಿಂಗ್, ಓಎಲ್​​ಎಕ್ಸ್, ಯು ಆರ್ ಕಾರ್ಡ್ ಫ್ರಾಡ್ ಅಪರಾಧ ಪ್ರಕರಣ ಹೆಚ್ಚಾಗ್ತಿದೆ. ಹೀಗಾಗಿ ಪೊಲೀಸರು ಕೂಡ ಇದರ ಬಗ್ಗೆ ನಿಗಾ ಇಟ್ಟಿದ್ದಾರೆ ಎಂದರು.

ಸಿಲಿಕಾನ್ ಸಿಟಿಯಲ್ಲಿ ಸೈಬರ್ ಅಪರಾಧ ಹೆಚ್ಚಳ: ಸಂದೀಪ್ ಪಾಟೀಲ್
ಸಾರ್ವಜನಿಕರು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮ:* ಬ್ಯಾಂಕ್ ನಂಬರ್, ಎಟಿಎಂ ನಂಬರ್​ ಶೇರ್‌ ಮಾಡಬಾರದು * ಯಾರಾದರು ಬ್ಯಾಂಕಿಂದ ಫೋನ್ ಮಾಡ್ತಿದಿವಿ ಎಂದು ನಂಬಿಸಿದಾಗ ಅವರ ಬಗ್ಗೆ ವಿಚಾರಣೆ ಮಾಡಬೇಕು * ಮೇಸೆಜ್, ಇಮೇಲ್​​ನಲ್ಲಿ ಲಾಟರಿ ಗೆದ್ದಿದ್ದಿರಾ ಎಂದು ನಂಬಿಸಿದಾಗ ಅದನ್ನ ನಂಬಬಾರದು * ಗಿಫ್ಟ್ ಬಂದಿದೆ ಸರ್ವೀಸ್ ಟ್ಯಾಕ್ಸ್ ಕಟ್ಟಿ ಎಂದಾಗ ಯಾವುದೇ ರಿಯಾಕ್ಟ್ ಮಾಡಬಾರದು * ಸಾಮಾಜಿಕ ಜಾಲತಾಣದಲ್ಲಿ ಗೆಳೆತನ ಮಾಡುವಾಗ ಬಹಳ ಜಾಗೃತೆಯಾಗಿರಬೇಕು * ಎಲ್ಲಾದರು ಶಾಪಿಂಗ್ ಹೋದಾಗ ಫೋನ್ ನಂಬರ್ ಶೇರ್ ಮಾಡಬಾರದು.

For All Latest Updates

TAGGED:

ABOUT THE AUTHOR

...view details