ಕರ್ನಾಟಕ

karnataka

ETV Bharat / city

ಮಾಜಿ ಸಿಎಂ ಸಿದ್ದರಾಮಯ್ಯಗೆ ಜ್ಞಾನೋದಯವಾಗಿದೆ : ಮಾಜಿ ಸಚಿವ ಸಾ.ರಾ. ಮಹೇಶ್ ಟಾಂಗ್ - ಉಪಚುನಾವಣೆ ಫಲಿತಾಂಶ ಕುರಿತು ಸಾರಾ ಮಹೇಶ್​​ ಪ್ರತಿಕ್ರಿಯೆ

ಕಾಂಗ್ರೆಸ್​​ಗೆ ಉಳಿಗಾಲವಿಲ್ಲ ಎಂಬ ವಿಷಯ ತಡವಾಗಿಯಾದರೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಜ್ಞಾನೋದಯವಾಗಿದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ವ್ಯಂಗ್ಯವಾಡಿದರು.

now-siddaramaiah-realized-situation-of-congress-party-sr-mahesh-said
ಸಾರಾ ಮಹೇಶ್

By

Published : Nov 10, 2020, 7:15 PM IST

ಬೆಂಗಳೂರು : ಜೆಡಿಎಸ್ ಪಕ್ಷದ ಅಸ್ತಿತ್ವ ಕುಸಿದಿದೆ, ಕಾಂಗ್ರೆಸ್‌ಗೆ ಉಳಿಗಾಲವಿಲ್ಲ ಎಂಬುದು ತಡವಾಗಿಯಾದರೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಜ್ಞಾನೋದಯವಾಗಿದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಮಾತಿನ ಚಾಟಿ ಬೀಸಿದ್ದಾರೆ.

ಸಿದ್ದರಾಮಯ್ಯ ಅವರು, ಜೆಡಿಎಸ್ ತನ್ನ ಮತಗಳನ್ನು ಉಳಿಸಿ ಕೊಂಡಿದ್ದರೆ, ಬಿಜೆಪಿ ಸುಲಭವಾಗಿ ಗೆಲ್ಲುತ್ತಿರಲಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಜಾತ್ಯತೀತ ಜನತಾದಳ ಪಕ್ಷದ ಅಸ್ತಿತ್ವ ಸಡಿಲವಾದರೆ ಕಾಂಗ್ರೆಸ್ ಗೆ ಉಳಿಗಾಲವಿಲ್ಲ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎಂದು ಸಾ.ರಾ .ಮಹೇಶ್ ಪತ್ರಿಕಾ ಹೇಳಿಕೆಯಲ್ಲಿ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಕೂಡ ಉಪಚುನಾವಣೆಗಳಲ್ಲಿ ಹೀನಾಯವಾಗಿ ಸೋತಿದೆ. ನಮ್ಮ ಪಕ್ಷದ ಮೇಲೆ ಗೂಬೆ ಕೂರಿಸುವ ಮೊದಲು ಕಾಂಗ್ರೆಸ್​ನ ಬುಡ ಅಲ್ಲಾಡುತ್ತಿರುವುದು ಸಿದ್ದರಾಮಯ್ಯ ಅವರಿಗೆ ಸ್ವಯಂವೇದ್ಯವಾಗಿದೆ ಎಂದು ಅವರು ವ್ಯಂಗ್ಯ ಮಾಡಿದ್ದಾರೆ.

ಕಾಂಗ್ರೆಸ್ ಹೀನಾಯ ಸೋಲಿಗೆ ಆ ಪಕ್ಷದ ಒಳಗಿನ ನಾಯಕರ ನಡುವಣ ಒಳಬೇಗುದಿ ಕಾರಣ ಎಂಬುದು ಗುಟ್ಟಾಗಿ ಉಳಿದಿಲ್ಲ. ಮೈಸೂರಿನ ಸಂಸದರು ಹೇಳುವಂತೆ ಸಿದ್ದರಾಮಯ್ಯ ಅವರು ಬಿಜೆಪಿಗೆ ಬೆಂಬಲಿಸಿರುವ ಗುಮಾನಿ ಕೆಲ ಕಾಂಗ್ರೆಸ್ ನಾಯಕರಿಗೂ ಕಾಡುತ್ತಿದೆ ಎಂದು ಸಾ.ರಾ. ಮಹೇಶ್ ಹೇಳಿದ್ದಾರೆ.

ABOUT THE AUTHOR

...view details