ಕರ್ನಾಟಕ

karnataka

ಲೋಕಾಯುಕ್ತದಿಂದ ಇಬ್ಬರು ಸಚಿವರು, ಶಾಸಕಿಗೆ ನೋಟಿಸ್

By

Published : Nov 12, 2020, 5:06 PM IST

ಜೂನ್​​ 30ರೊಳಗೆ ಆಸ್ತಿ ಸಲ್ಲಿಸದ ಸಚಿವರಾದ ಶ್ರೀರಾಮುಲು ಮತ್ತು ಗೋಪಾಲಯ್ಯ ಹಾಗೂ ಶಾಸಕಿ ಪೂರ್ಣಿಮಾ ಅವರಿಗೆ 10 ದಿನದೊಳಗೆ ವಿವರ ಸಲ್ಲಿಕೆ ಮಾಡುವಂತೆ ಲೋಕಾಯುಕ್ತರು ತಾಕೀತು ಮಾಡಿದ್ದಾರೆ.

Notice to two ministers lawmaker from Lokayukta
ಲೋಕಾಯುಕ್ತದಿಂದ ಇಬ್ಬರು ಸಚಿವರು, ಶಾಸಕಿಗೆ ನೋಟಿಸ್

ಬೆಂಗಳೂರು:ಆಸ್ತಿ ವಿವರ ಸಲ್ಲಿಸದ ಇಬ್ಬರು ಸಚಿವರು ಸೇರಿ ಮೂವರಿಗೆ ಆಸ್ತಿ‌ ಪ್ರಮಾಣ ಪತ್ರ ಸಲ್ಲಿಸುವಂತೆ ಲೋಕಾಯುಕ್ತರು ರಿಮ್ಯಾಂಡ್ ಲೆಟರ್ ಬರೆದಿದ್ದಾರೆ.

ಸಮಾಜ ಕಲ್ಯಾಣ ಸಚಿವ ಶ್ರೀರಾಮಲು, ಆಹಾರ ಸಚಿವ ಗೋಪಾಲಯ್ಯ ಹಾಗೂ ಶಾಸಕಿ‌ ಕೆ.ಪೂರ್ಣಿಮಾ ಅವರಿಗೆ ಪತ್ರ ಬರೆದು 10 ದಿನದೊಳಗೆ ಆಸ್ತಿ ವಿವರ ಸಲ್ಲಿಸುಂತೆ ತಾಕೀತು ಮಾಡಿದ್ದಾರೆ. ಪ್ರತಿವರ್ಷ ಜೂನ್ 30ರೊಳಗೆ ಆಸ್ತಿ ಪ್ರಮಾಣ ಪತ್ರ ಲೋಕಾಯುಕ್ತಕ್ಕೆ ನೀಡುವುದು‌ ಕಡ್ಡಾಯ. ಆದರೂ ಜನಪ್ರತಿನಿಧಿಗಳು ಆಸ್ತಿ ಘೋಷಿಸದೆ ಕಾನೂನು ಉಲ್ಲಂಘಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ‌ ಕಾರ್ಯಕರ್ತ ಎಚ್.ಎಂ.ವೆಂಕಟೇಶ್, ಆಸ್ತಿ ಘೋಷಿಸದ ಜನಪ್ರತಿನಿಧಿಗಳ ವಿರುದ್ಧ ಕೈಗೊಂಡ ಕ್ರಮ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಲೋಕಾಯುಕ್ತಕ್ಕೆ ಅರ್ಜಿ ಹಾಕಿದ್ದರು. ‌ಇದರಂತೆ ಇಬ್ಬರು ಸಚಿವರು ಸೇರಿ ಮೂವರು ಜನಪ್ರತಿನಿಧಿಗಳಿಗೆ ಆಸ್ತಿ ವಿವರ ಸಲ್ಲಿಸುವಂತೆ ನೆನೆಪಿನ ಪತ್ರ ಬರೆದಿರುವುದಾಗಿ ಹೇಳಿದೆ.

ABOUT THE AUTHOR

...view details