ಬೆಂಗಳೂರು :ದುಪ್ಪಟ್ಟು ಹಣ ವಸೂಲಿ ಮಾಡುತ್ತಿಲ್ಲ. ಮುಂದಿನ ಹಬ್ಬದ ದಿನಗಳಲ್ಲಿ ಬಸ್ಗಳ ಕೊರತೆ ಉಂಟಾದರೆ ಪ್ರಯಾಣದ ದರ ಹೆಚ್ಚಿಸುತ್ತೇವೆ ಎಂದು ಖಾಸಗಿ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಹೇಳಿದರು.
ಈ ಕುರಿತು ಮಾತನಾಡಿದ ಅವರು, 15 ದಿನದ ಹಿಂದೆ ಸಾರಿಗೆ ನೌಕರರು ಬಂದ್ ಮಾಡುವುದು ನಿಗದಿಯಾಗಿತ್ತು. ಮಾ.27ಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಎಲ್ಲಾ ಖಾಸಗಿ ಬಸ್ ಸಂಘಟನೆಗಳ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು. ನಿನ್ನೆ ರಾತ್ರಿಯಿಂದ ಸುಮಾರು 500ಕ್ಕೂ ಹೆಚ್ಚು ಖಾಸಗಿ ಬಸ್ಗಳು ಸಾರ್ವಜನಿಕರ ಸೇವೆಗೆ ಕಾರ್ಯಾಚರಣೆ ನಡೆಸಿವೆ ಎಂದರು.
ಮೈಸೂರು ರಸ್ತೆಯಲ್ಲೇ 500 ಬಸ್ ಕಾರ್ಯಾಚರಣೆ ನಡೆಸುತ್ತಿವೆ. ಅದರಲ್ಲಿ ಕೇವಲ 100 ಬಸ್ಗಳಿಗೆ ಪ್ರಯಾಣಿಕರು ಲಭ್ಯವಾಗಿದ್ದಾರೆ. ಮಾಗಡಿ ರಸ್ತೆ ಮತ್ತು ಯಲಹಂಕದಲ್ಲೂ ಇದೇ ಪರಿಸ್ಥಿತಿ ಇದೆ. ಬೆಂಗಳೂರಿನ ಎಲ್ಲ ಭಾಗದಿಂದಲೂ ಖಾಸಗಿ ಮಾಲೀಕರು ಸರ್ಕಾರಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದರು.