ಕರ್ನಾಟಕ

karnataka

ETV Bharat / city

ತನಿಖಾ ಸಂಸ್ಥೆಗಳಲ್ಲಿವೆ ನೂರೆಂಟು ಕಷ್ಟಗಳು.. ಸೂಕ್ತ ಸೌಲಭ್ಯವಿಲ್ಲದೆ ಅವ್ಯವಸ್ಥೆ - ತನಿಖಾ ಸಂಸ್ಥೆಗಳಲ್ಲಿವೆ ನೂರೆಂಟು ಕಷ್ಟಗಳು

ರಾಜ್ಯದ ತನಿಖಾ ಸಂಸ್ಥೆಗಳಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ತನಿಖೆ ನಿಂತ ನೀರಾಗುತ್ತಿದೆ. ಈ ಕುರಿತ ಮಾಹಿತಿ ನಿಮಗಾಗಿ..

Investigative agencies
ತನಿಖಾ ಸಂಸ್ಥೆ

By

Published : Sep 27, 2020, 12:53 PM IST

ಬೆಂಗಳೂರು: ಒಂದಲ್ಲ ಒಂದು ಪ್ರಕರಣಗಳು ಪ್ರತಿದಿನ ರಾಜ್ಯದಲ್ಲಿ ನಡೆಯುತ್ತಿದ್ದು, ಕೆಲ ಗಂಭೀರ ಕೇಸ್​ಗಳ ತನಿಖೆ ನಡೆಸಲು ತನಿಖಾಧಿಕಾರಿಗಳಿಗೆ ಆಗುತ್ತಿಲ್ಲ. ಕಾರಣ ಯಾವುದೇ ಸೌಲಭ್ಯಗಳು ಅಧಿಕಾರಿಗಳಿಗೆ ಸಿಗುತ್ತಿಲ್ಲ. ಪ್ರಮುಖ ಪ್ರಕರಣಗಳಾದಾಗ ರಾಜ್ಯ ಹಾಗೂ ಕೇಂದ್ರ ಎರಡೂ ತನಿಖಾ ಸಂಸ್ಥೆಗಳು ಬರುತ್ತವೆ. ಆದರೆ ಮೂಲಭೂತ ಸೌಕರ್ಯ ಇಲ್ಲದೆ ತನಿಖೆ ನಿಂತ ನೀರಾಗುತ್ತಿದೆ.

ರಾಜ್ಯದ ಸಿಐಡಿ, ಸಿಸಿಬಿ, ಐಎಸ್​ಡಿ, ಸೈಬರ್ ಹಾಗೆ ಕೇಂದ್ರದ ಇಡಿ, ಸಿಬಿಐ, ಐಟಿ, NIA ಗೆ ನುರಿತ ಅಧಿಕಾರಿ, ಸಿಬ್ಬಂದಿ ಕಚೇರಿ ವ್ಯವಸ್ಥೆ, ವಾಹನ ಸೌಲಭ್ಯ, ಅತ್ಯಾಧುನಿಕ ತಂತ್ರಜ್ಞಾನಕ್ಕೂ ವ್ಯವಸ್ಥೆ ಇಲ್ಲದೆ ಪರಿಣಾಮಕಾರಿಯಾಗಿ ಬಹುತೇಕ ಕೆಲಸ ಆಗ್ತಿಲ್ಲ ಎಂದು‌ ಹೆಸರು ಹೇಳಲಿಚ್ಚಿಸದ ಅಧಿಕಾರಿಗಳು ತಿಳಿಸಿದ್ದಾರೆ‌.

ಸಿಐಡಿಯಲ್ಲಿ ಇಲ್ಲ ವಾಹನ ಸೌಲಭ್ಯ:

ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಿಐಡಿ ಹಲವಾರು ಪ್ರಕರಣಗಳ ತನಿಖೆ ನಡೆಸುತ್ತಿದೆ. ಆದರೆ ಸಿಐಡಿಯಲ್ಲಿ ವಾಹನ ಸೌಲಭ್ಯ ಇಲ್ಲ, ಹಲವಾರು ಗಂಭೀರ ಕೇಸ್​ಗಳು ಸಿಐಡಿಗೆ ವರ್ಗಾವಣೆಯಾಗುತ್ತಿವೆ. ಆದರೆ ವಾಹನಕ್ಕೆ ಡ್ರೈವರ್ ಇಲ್ಲದೆ, ಇನ್ಸ್​ಪೆಕ್ಟರ್, ಎಸಿಪಿ ಇವರೇ ವಾಹನ ಚಲಾಯಿಸುವ ಅನಿವಾರ್ಯತೆ ಇದೆ. ಅಲ್ಲದೆ ಕೇಸ್ ದಾಖಲಿಸಿಕೊಳ್ಳಲು ಸಿಬ್ಬಂದಿಯೂ ಇಲ್ಲ ಹೀಗಾಗಿ ಕೇಸ್ ತನಿಖೆ ನಡೆಸಲು ಅಧಿಕಾರಿಗಳು ಆಸಕ್ತಿ ತೋರಿಸುತ್ತಿಲ್ಲ ಎಂಬುದು ತಿಳಿದು ಬಂದಿದೆ.

ಸೈಬರ್ ಠಾಣೆಗಳಿಗಿಲ್ಲ ತಾಂತ್ರಿಕ ಶಕ್ತಿ:

ಸೈಬರ್ ಅಪರಾಧ ಅಥವಾ ಐಟಿ ಆ್ಯಕ್ಟ್​ನಂತಹ ಪ್ರಕರಣಗಳು ಸೈಬರ್ ಠಾಣೆಗೆ ಬರುತ್ತವೆ. ಈಗಾಗಲೇ CEN ಠಾಣೆಗಳನ್ನು ತೆರೆಯಲಾಗಿದೆ. ಆದರೆ ಬೇಕಾದ ತರಬೇತಿ ಇನ್ಸ್​ಪೆಕ್ಟರ್, ಸಬ್ ಇನ್ಸ್​ಪೆಕ್ಟರ್​ಗೆ ಇಲ್ಲ. ಸೈಬರ್​ಗೆ ಬೇಕಾದ ತಾಂತ್ರಿಕ ತರಬೇತಿ ಇಲ್ಲದೆ ಕೇವಲ ದೂರು ದಾಖಲಿಸಿಕೊಳ್ಳುವ ಠಾಣೆಗಳಾಗ್ತಿವೆ. ಆದರೆ ಇದರ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಿಲ್ಲ ಎಂಬ ಆರೋಪಗಳಿವೆ. ಕೇವಲ ಹೆಸರಿಗಷ್ಟೇ ಸಿಇಎನ್ ಠಾಣೆ ಮಾಡಿದಂತಾಗಿದೆ. ಅತ್ತ ಸೈಬರ್ ಪ್ರಕರಣಗಳು ಹೆಚ್ಚಾಗಿ ಪ್ರತಿ ದಿನ ಬೆಳಕಿಗೆ ಬರ್ತಿದೆ.

ಸಿಸಿಬಿ ಅಧಿಕಾರಿಗಳಿಗೆ ಒತ್ತಡ:

ಗಲಭೆ, ಉಗ್ರ ಚಟುವಟಿಕೆ, ಡ್ರಗ್ ಕೇಸ್ ಈ ಎಲ್ಲಾ ಪ್ರಕರಣಗಳೂ ಸಿಸಿಬಿ ತೆಕ್ಕೆಗೆ ಬಂದರೂ ಸರಿಯಾಗಿ ತನಿಖೆ ನಡೆಸಬೇಕಾದ ಸಿಬ್ಬಂದಿ ಇಲ್ಲ. ಎಲ್ಲಾ ಕೇಸ್​ಗಳ ತನಿಖೆ ನಡೆಸಲು ಆಗಲ್ಲ. ಒಬ್ಬ ಅಧಿಕಾರಿಗೆ ಮೂರ್ನಾಲ್ಕು ಕೇಸ್​ಗಳ ಹೊಣೆ ನೀಡಲಾಗುತ್ತಿದೆ. ಹೀಗಾಗಿ ಅಲ್ಲಿನ ಅಧಿಕಾರಿಗಳು ಒತ್ತಡದಲ್ಲೇ ಪ್ರಕರಣಗಳನ್ನು ನಿಭಾಯಿಸುತ್ತಿದ್ದಾರೆ ಎನ್ನಲಾಗ್ತಿದೆ.

ಲೋಕಾಯುಕ್ತ/ಎಸಿಬಿ ನಿರಾಸಕ್ತಿ

ಲೋಕಾಯುಕ್ತ, ಎಸಿಬಿಯೂ ಸಂಕಷ್ಟದಲ್ಲಿದೆ. ಇಲ್ಲಿಯ ಅಧಿಕಾರಿಗಳು ಕಚೇರಿಯಲ್ಲೇ ಕೆಲಸ ಮಾಡಬೇಕು. ವರ್ಗಾವಣೆ ಆದ ಪ್ರಕರಣಗಳ ತನಿಖೆ ಆಗುತ್ತಿಲ್ಲ. ಸಿಬ್ಬಂದಿಯೂ ಇಲ್ಲ, ಹೀಗಾಗಿ ಕೇಸ್​ಗಳು ಆಮೆಗತಿಯಲ್ಲಿವೆ.

ಎಟಿಎಸ್ ವಿಭಾಗಕ್ಕೆ ಪೊಲೀಸ್​ ವರಿಷ್ಠಾಧಿಕಾರಿ ಇಲ್ಲ. ಭಯೋತ್ಪಾದನೆ ನಿಗ್ರಹ ಮಾಡಲು ನಗರದಲ್ಲಿ ಎಟಿಎಸ್ ರಚನೆ ಮಾಡಲಾಗಿದೆ. ಆದರೆ ಇದಕ್ಕೆ ಬೇಕಾದ ಎಸ್ಪಿ ಇಲ್ಲ. ಬೇರೆ ರಾಜ್ಯದ ಜೊತೆ ಒಡನಾಟಕ್ಕಾಗಿ ಭಾಷೆ ಅಥವಾ ಮಾಹಿತಿ ಕಲೆಹಾಕಲು ಆತ್ಮೀಯತೆ ಬೇಕಾಗುತ್ತೆ. ಆದರೆ ಕೇವಲ ಎಸಿಪಿ ಮಟ್ಟದಲ್ಲಿ ಪ್ರಕರಣದ ತನಿಖೆಯನ್ನು ನಿಭಾಯಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಇದಕ್ಕೂ ಯಾವುದೇ ಸೌಲಭ್ಯವಿಲ್ಲ. ಸದ್ಯ ಬಹುತೇಕ ಗಂಭೀರ ಪ್ರಕರಣ ಬೆಳಕಿಗೆ ಬರುತ್ತಿರುವ ಸಂದರ್ಭದಲ್ಲಿ ಗೃಹ ಇಲಾಖೆ ಇದರ ಬಗ್ಗೆ ಗಮನ ಹರಿಸಬೇಕಾದದ್ದು ಅನಿವಾರ್ಯವಾಗಿದೆ.

ABOUT THE AUTHOR

...view details