ಕರ್ನಾಟಕ

karnataka

ETV Bharat / city

ಬೆಂಗಳೂರು ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ! - two wheelers on Nice Road

ಇದೇ ತಿಂಗಳ 16ರಿಂದ ರಾತ್ರಿ 10ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

no permission to two wheelers on Nice Road at night time in Bangalore
ಬೆಂಗಳೂರು ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ

By

Published : Jan 13, 2022, 1:23 PM IST

ಬೆಂಗಳೂರು: ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಮುಂದಾಗಿರುವ ನೈಸ್ ಸಂಸ್ಥೆ ಇದೇ ತಿಂಗಳ 16ರಿಂದ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ ಹೇರಿದೆ.

ಸುರಕ್ಷತಾ ದೃಷ್ಟಿಯಿಂದ ರಾತ್ರಿ ವೇಳೆ ಟೂ ವೀಲರ್​ಗೆ ನಿಷೇಧ ಹೇರಲಾಗಿದೆ. ಸರಣಿ ಅಪಘಾತಗಳಿಂದ ದ್ವಿಚಕ್ರ ವಾಹನ ಸವಾರರು ಸಾವನ್ನಪ್ಪುವ ಪ್ರಕರಣಗಳು ಹೆಚ್ಚಾಗಿತ್ತು.‌ ಅಲ್ಲದೇ ರಾತ್ರಿ ಸಮಯದಲ್ಲಿ ವೇಗವಾಗಿ ಚಾಲನೆ ಮಾಡುತ್ತಿದ್ದ ಇತರ ವಾಹನಗಳು ಟೂ ವೀಲರ್ಸ್ ಗಳನ್ನು ಗಮನಕ್ಕೆ ಇಟ್ಟುಕೊಳ್ಳುತ್ತಿರಲಿಲ್ಲ. ಈ ಕಾರಣದಿಂದ ಬೈಕ್ ಅಪಘಾತಗಳು ಹೆಚ್ಚಾಗಿತ್ತು‌.‌ ಇದೇ ಕಾರಣಕ್ಕೆ ರಾತ್ರಿ ಸಮಯದಲ್ಲಿ ನೈಸ್​ ರಸ್ತೆಯಲ್ಲಿ ಬೈಕ್​ಗಳಿಗೆ ನೋ ಎಂಟ್ರಿ ಮಾಡಬೇಕು ಎಂದು ಸಂಚಾರಿ ಜಂಟಿ ಆಯುಕ್ತ ರವಿಕಾಂತೇಗೌಡ ನೈಸ್ ಸಂಸ್ಥೆಗೆ ಸೂಚಿಸಿದ್ದರು.‌

ಇದನ್ನೂ ಓದಿ:ಹೈಕೋರ್ಟ್​​ ಮೆಟ್ಟಿಲೇರಿದ ಶುಲ್ಕ ಪಾವತಿಸದ ವಿದ್ಯಾರ್ಥಿ.. ಪರೀಕ್ಷೆ ಬರೆಯಲು ಅನುಮತಿಸಿ ಎಂದ ನ್ಯಾಯಾಲಯ!

ಈ ಹಿನ್ನೆಲೆ ಇದೇ 16ರಿಂದ ನೈಸ್ ರಸ್ತೆಯಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 5ರ ವರೆಗೆ ಸಂಚಾರಕ್ಕೆ ನಿರ್ಬಂಧ ಹೇರಿ ನೈಸ್ ಸಂಸ್ಥೆ ಅಧಿಕೃತ ಆದೇಶ ಹೊರಡಿಸಿದೆ.

ABOUT THE AUTHOR

...view details