ಬೆಂಗಳೂರು:ನಾಳೆಯಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಇಂದಿರಾ ಕ್ಯಾಂಟೀನ್ಲ್ಲಿ ಉಚಿತ ಊಟದ ವ್ಯವಸ್ಥೆ ಇರುವುದಿಲ್ಲ.
ಬದಲಿಗೆ ಹಿಂದಿನ ವ್ಯವಸ್ಥೆಯಂತೆ ಬೆಳಗ್ಗಿನ ಉಪಹಾರಕ್ಕೆ ರೂ.5/- ಹಾಗೂ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 10 ರೂಪಾಯಿ ನೀಡಿ. ಇಂದಿರಾ ಕ್ಯಾಂಟೀನ್ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಟೋಕನ್ಗಳನ್ನ ಪಡೆದು, ಆಹಾರದ ಪೊಟ್ಟಣಗಳನ್ನು ವಿತರಿಸಲಾಗುವುದೆಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ.
ಕೊರೊನಾ ವೈರಸ್ ಭೀತಿಯಿಂದ ಬಿಬಿಎಂಪಿಯ ವ್ಯಾಪ್ತಿಯಲ್ಲಿ 26-3-2020 ರಿಂದ ಇದ್ದ ಕಟ್ಟಡ/ಕೂಲಿ ಕಾರ್ಮಿಕರು, ವಲಸಿಗರು ಹಾಗೂ ಅಗತ್ಯವಿರುವವರಿಗೆ ಉಚಿತವಾಗಿ ಇಂದಿರಾಕ್ಯಾಂಟೀನ್ಗಳಲ್ಲಿ ಆಹಾರವನ್ನು ಸರಬರಾಜು ಮಾಡಲಾಗುತ್ತಿತ್ತು. ಈ ನಡುವೆ ಕಟ್ಟಡ/ಕೂಲಿ ಕಾರ್ಮಿಕರು, ವಲಸಿಗರು ಹಾಗೂ ಅಗತ್ಯವಿರುವವರಿಗೆ ಆಹಾರ ಪದಾರ್ಥಗಳನ್ನ ಸರ್ಕಾರವೇ ಒದಗಿಸುತ್ತಿದೆ.
ಸರ್ಕಾರದ ವತಿಯಿಂದ ಸುಮಾರು 15 ಲಕ್ಷ ಕಟ್ಟಡ/ಕೂಲಿ ಕಾರ್ಮಿಕರಿಗೆ, ರೂ.2,000/- ಮೊತ್ತದ ನಗದು ಸಹಾಯ ಧನ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಪ್ರತಿ ಕೂಲಿ ಕಾರ್ಮಿಕರು/ಬಡ ಕುಟುಂಬಗಳಿಗೆ 2 ತಿಂಗಳಿಗೆ ಸಾಕಾಗುವಷ್ಟು ಆಹಾರ ಪದಾರ್ಥ ಪೂರೈಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಬಿಬಿಎಂಪಿಯ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತ ಊಟದ ವ್ಯವಸ್ಥೆ ಇರುವುದಿಲ್ಲ ಎಂದು ಅನಿಲ್ ಕುಮಾರ್ ತಿಳಿಸಿದ್ದಾರೆ.