ಧಾರವಾಡ: ಜಿಲ್ಲೆಯಲ್ಲಿ ಭಾನುವಾರ ಯಾವುದೇ ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿಲ್ಲ. ಆದ್ರೆ ಹಳೆಯ ಹಾಗೂ ಎಸ್ಡಿಎಮ್ ವೈದ್ಯಕೀಯ ಕಾಲೇಜಿನ ಕೇಸ್ಗಳು ಸೇರಿ ಒಟ್ಟು 311 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
Dharwad corona report : ಇಳಿಕೆ ಕಂಡ ಕೊರೊನಾ, SDM ಸೇರಿ 311 ಸಕ್ರಿಯ ಪ್ರಕರಣಗಳು - ಧಾರವಾಡ ಕೊರೊನಾ ವರದಿ
ಧಾರವಾಡದ ಎಸ್ಡಿಎಂ ಕಾಲೇಜಿನಲ್ಲಿ ಕೊರೊನಾ ಪತ್ತೆಯಾದ ಹಿನ್ನೆಲೆ ಜಿಲ್ಲಾಡಳಿತ ಹೈಅಲರ್ಟ್ ಅಗಿದೆ. ಭಾನುವಾರ ಕೋವಿಡ್ ಪ್ರಕರಣಗಳು ಇಳಿಮುಖ ಕಂಡಿವೆ. ಹಳೆಯ ಹಾಗೂ ಎಸ್ಡಿಎಂ ಪ್ರಕರಣಗಳು ಸೇರಿ ಒಟ್ಟು 311 ಸಕ್ರಿಯ ಪ್ರಕರಣಗಳು ಇವೆ ಎಂದು ಜಿಲ್ಲಾಡಳಿತ ತಿಳಿಸಿದೆ.
SDM corona cases : ಎಸ್ಡಿಎಂ ಮೆಡಿಕಲ್ ಕಾಲೇಜಿನಲ್ಲಿ ಮೂರು ದಿನಗಳಿಂದ ಕೊರೊನಾ ಸ್ಫೋಟಗೊಂಡಿತ್ತು. ಭಾನುವಾರ ಕೋವಿಡ್ ಪ್ರಕರಣಗಳು ಸ್ವಲ್ಪ ಇಳಿಮುಖ ಕಂಡಿವೆ. ಆಸ್ಪತ್ರೆಯಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಈವರೆಗೆ ವೈರಸ್ ತಗುಲಿರುವ 306 ಜನರ ಪೈಕಿ 14 ಮಂದಿ ವೈದ್ಯರಿಗೆ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗ್ತಿದೆ.
ಸೋಂಕು ಕಾಣಿಸಿಕೊಂಡಿರುವ ಕೆಲವರಲ್ಲಿ ಮಾತ್ರ ರೋಗದ ಲಕ್ಷಣಗಳು ಕಂಡುಬಂದಿವೆ. ಉಳಿದವರಲ್ಲಿ ಯಾವುದೇ ಲಕ್ಷಣಗಳಿಲ್ಲ ಎಂಬ ಮಾಹಿತಿಯಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಸತ್ತೂರಿನ ಎಸ್ಡಿಎಂ ಸುತ್ತಲಿನ 500 ಮೀಟರ್ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ಇಂದಿನಿಂದ ಡಿಸೆಂಬರ್ 1 ರವರೆಗೆ ಮೂರು ದಿನಗಳ ಕಾಲ ರಜೆ ಮುಂದುವರಿಕೆ ಮಾಡಿದೆ. ಎಸ್ಡಿಎಂ ಆವರಣದಲ್ಲಿ ಸೋಂಕು ಪತ್ತೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.