ಬೆಂಗಳೂರು:ಹೊಸ ವರ್ಷದ ಸಂಭ್ರಮ ಒಮಿಕ್ರಾನ್ ಹರಡಲು ದಾರಿ ಮಾಡಿಕೊಡದಿರಲಿ ಎಂದು ರಾಜ್ಯ ಸರ್ಕಾರ ಹೊರಡಿಸಿರುವ ನೈಟ್ ಕರ್ಫ್ಯೂ ಆದೇಶ ಇಂದಿನಿಂದ (ಡಿ.28) ಜಾರಿಗೆ ಬರಲಿದ್ದು, ಜ.7 ರ ವರೆಗೆ ಮುಂದುವರಿಯಲಿದೆ.
ಕರ್ಫ್ಯೂ ಜೊತೆಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ, ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಜನರ ಓಡಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗಿದೆ.
ಸರ್ಕಾರದ ನಿಯಮಾನುಸಾರ 144 ಸೆಕ್ಷನ್ ಜಾರಿಯಲ್ಲಿರಲಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
ಯಾವುದಕ್ಕೆ ನಿರ್ಬಂಧ? ನಿರ್ಬಂಧವಿಲ್ಲ?:
- ನೈಟ್ ಕರ್ಫ್ಯೂ ವೇಳೆ ಅನಾರೋಗ್ಯ ಸಮಸ್ಯೆವುಳ್ಳವರು, ರೋಗಿಗಳು ಮತ್ತು ಅವರ ಪರಿಚಾರಕರು/ವ್ಯಕ್ತಿಗಳ ಓಡಾಟಕ್ಕೆ ತುರ್ತು ಅಗತ್ಯ ಸಂಚಾರಕ್ಕೆ ಅವಕಾಶ.
- ರಾತ್ರಿಯಲ್ಲಿ ಕೆಲಸ ನಿರ್ವಹಿಸುವ ಅಗತ್ಯವಿರುವ ಎಲ್ಲಾ ಕೈಗಾರಿಕೆಗಳು/ಕಂಪನಿಗಳು ಕಾರ್ಯ ನಿರ್ವಹಿಸಲು ಅನುಮತಿ ನೀಡಬಹುದು.
- ಅಂತಹ ಸಂಸ್ಥೆಗಳ ಉದ್ಯೋಗಿಗಳು ಸಂಬಂಧಿತ ಸಂಸ್ಥೆ/ಸಂಸ್ಥೆಯಿಂದ ನೀಡಲಾದ ಗುರುತಿನ ಚೀಟಿ ತೋರಿಸಿ ಸಂಚಾರ ಮಾಡಬಹುದು.
- ಟೆಲಿಕಾಂ ಮತ್ತು ಇಂಟರ್ನೆೆಟ್ ಸೇವಾ ಪೂರೈಕೆದಾರರ ಉದ್ಯೋಗಿಗಳು ಮತ್ತು ವಾಹನಗಳು ತಮ್ಮ ಸಂಸ್ಥೆಯಿಂದ ನೀಡಲಾದ ಗುರುತಿನ ಚೀಟಿಯನ್ನು ತೋರಿಸಬಹುದು.
- IT ಮತ್ತು ITeS ಕಂಪನಿಗಳ ಉದ್ಯೋಗಿಗಳು ಆದಷ್ಟು ವರ್ಕ್ ಫ್ರಂ ಹೋಂ ಇದ್ದು, ಅಗತ್ಯ ಇದ್ದವರಷ್ಟೇ ಕಚೇರಿಗೆ ತೆರಳಬಹುದು.
- ಮೆಡಿಕಲ್ ಸೇರಿದಂತೆ ವೈದ್ಯಕೀಯ, ತುರ್ತು ಮತ್ತು ಅಗತ್ಯ ಸೇವೆಗಳು ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲು ಅವಕಾಶ ಇದೆ. ಇತರ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
- ಎಲ್ಲಾ ರೀತಿಯ ಸರಕುಗಳ ಸಾಗಣೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಟ್ರಕ್‌ಗಳು, ಸರಕು ವಾಹನಗಳು ಅಥವಾ ಖಾಲಿ ಸೇರಿದಂತೆ ಯಾವುದೇ ಸರಕು ವಾಹನಗಳ ಸಂಚಾರಕ್ಕೆ ಅವಕಾಶ ಇದೆ.
- ಹೋಮ್ ಡೆಲಿವರಿ ಮತ್ತು ಇ-ಕಾಮರ್ಸ್‌ನ ಕಂಪನಿಗಳನ್ನು ಅನುಮತಿಸಲಾಗಿದೆ.
- ಬಸ್ಗಳು, ರೈಲುಗಳು, ಮೆಟ್ರೋ ರೈಲು ಸೇವೆಗಳು ಮತ್ತು ವಿಮಾನ ಪ್ರಯಾಣಕ್ಕೂ ಅನುಮತಿಸಲಾಗಿದೆ.
- ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ ಓಡಾಟ ವಿಮಾನ ನಿಲ್ದಾಣಗಳು, ಬಸ್ ಟರ್ಮಿನಲ್‌ಗಳು/ಬಸ್ ನಿಲ್ದಾಣ, ರೈಲು ನಿಲ್ದಾಣಗಳು ಇತ್ಯಾದಿಗಳಿಗೆ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಪ್ರಯಾಣಿಕರ ಓಡಾಟಕ್ಕೆ ಯಾವುದೇ ನಿರ್ಬಂಧ ಇಲ್ಲ.
- ಆದರೆ ಪ್ರಯಾಣಿಕರು ಪ್ರಯಾಣ ದಾಖಲೆಗಳು/ಟಿಕೆಟ್‌ಗಳನ್ನು ಪ್ರದರ್ಶಿಸಿದರೆ ಮಾತ್ರ ಅವಕಾಶ ಇದೆ.
- ಡಿ. 30 ರಿಂದ ಜ.2 ರವರೆಗೆ ರೆಸ್ಟೋರೆಂಟ್‌ಗಳು/ಹೋಟೆಲ್‌ಗಳು/ಕ್ಲಬ್‌ಗಳು/ಪಬ್‌ಗಳಲ್ಲಿ ಶೇ.50 ರಷ್ಟು ಮಾತ್ರ ಆಸನ ವ್ಯವಸ್ಥೆ ಮಾಡಬೇಕು. ಎಲ್ಲಾ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್-19 ನೆಗಟಿವ್ ರಿಪೋರ್ಟ್ ಹೊಂದಿರಬೇಕು ಮತ್ತು 2 ಡೋಸ್ ಲಸಿಕೆ ಪಡೆದಿರಬೇಕು.
- ಡಿ. 28 ರಿಂದ ಎಲ್ಲಾ ಸಭೆಗಳು, ಸಮ್ಮೇಳನಗಳು, ಮದುವೆಗಳು ಸೇರಿದಂತೆ ಭಾಗವಹಿಸುವವರ ಸಂಖ್ಯೆಯನ್ನು 300 ಜನರಿಗೆ ಮಾತ್ರ ಸೀಮಿತಗೊಳಿಸಬೇಕು.
- ರಾಜ್ಯದಲ್ಲಿ ಕೋವಿಡ್ 19, ವಿಶೇಷವಾಗಿ ಒಮಿಕ್ರಾನ್ ರೂಪಾಂತರ ಹರಡುವುದನ್ನು ತಡೆಗಟ್ಟಲು ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಿಗೆ ಹೊಂದಿಕೊಂಡಿರುವ ಎಲ್ಲಾ ಗಡಿ ಜಿಲ್ಲೆಗಳಲ್ಲಿ ತೀವ್ರ ಗಸ್ತು ಮತ್ತು ಕಣ್ಗಾವಲಿಡುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ಕರ್ನಾಟಕದ 2 ತಿಂಗಳ ಮಗುವಿಗೆ ಮುಂಬೈನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ.. ದೇಶದಲ್ಲಿ ಮೊದಲ,ವಿಶ್ವದಲ್ಲೇ 2ನೇ ಪ್ರಕರಣ