ಬೆಂಗಳೂರು :ಸದಾ ಗಿಜುಗುಡುತ್ತಿದ್ದ ಎಂಜಿ ರೋಡ್ ಹಾಗೂ ಬಿಗ್ರೇಡ್ ರೋಡ್ ಸಂಪೂರ್ಣ ಸ್ತಬ್ಧವಾಗಿದೆ. ನೈಟ್ ಕರ್ಫ್ಯೂ ಜಾರಿಯಿಂದಾಗಿ ನಗರದೆಲ್ಲೆಡೆ ಬ್ಯಾರಿಕೇಡ್ ಹಾಕಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರಿಂದ ಜನರ ಓಡಾಟ ವಿರಳವಾಗಿದೆ.
ರಾತ್ರಿ 10ಗಂಟೆಯವರೆಗೂ ಓಡಾಟಕ್ಕೆ ಅವಕಾಶವಿದ್ದರೂ 9ಗಂಟೆಗೆ ಪೊಲೀಸರು ಚರ್ಚ್ ಸ್ಟ್ರೀಟ್, ಬಿಗ್ರೇಡ್ ರೋಡ್‌ಗಳಲ್ಲಿ ಬ್ಯಾರಿಕೇಡ್ ಹಾಕಿ ವಾಹನ ಸಂಚಾರಕ್ಕೆ ನಿಷೇಧ ಹೇರಿದ್ದಾರೆ. ಸ್ಥಳದಲ್ಲಿರುವ ಅಂಗಡಿ-ಮುಂಗಟ್ಟುಗಳು 9 ಗಂಟೆಗೆ ಬೀಗ ಹಾಕುವ ದೃಶ್ಯ ಸಾಮಾನ್ಯವಾಗಿತ್ತು.