ಕರ್ನಾಟಕ

karnataka

ETV Bharat / city

ವಿದ್ಯಾರ್ಥಿ ವೀಸಾದಲ್ಲಿದ್ದು ಬೆಂಗಳೂರಲ್ಲಿ ಮಾದಕ ವಸ್ತು ದಂಧೆ: ಓರ್ವನ ಬಂಧನ, ಮಾಲು ವಶ - ಸಿಸಿಬಿ ಪೊಲೀಸರಿಂದ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಬಂಧನ

ವಿದ್ಯಾರ್ಥಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್‌ ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

drug peddler
ಡ್ರಗ್ ಪೆಡ್ಲರ್

By

Published : Jun 16, 2021, 11:13 AM IST

ಬೆಂಗಳೂರು:ಲಾಕ್‌ಡೌನ್ ಸಡಿಲಗೊಳ್ಳುತ್ತಿದ್ದಂತೆ ನಗರದಲ್ಲಿ ಮತ್ತೆ ಡ್ರಗ್ ಪೆಡ್ಲರ್‌ಗಳ ಹಾವಳಿ ಹೆಚ್ಚಾಗಿದೆ. ಲಾಕ್‌ಡೌನ್ ಘೋಷಣೆಯಾದಾಗ ಸುಮ್ಮನಾಗಿದ್ದ ಡ್ರಗ್ ಪೆಡ್ಲರ್ಸ್ ಅನ್‌ಲಾಕ್ ಆಗುತ್ತಿದ್ದಂತೆ ಇದೀಗ ಮತ್ತೆ ಅವರ ದಂಧೆ ಶುರು ಮಾಡಿದ್ದಾರೆ.

ವಶಪಡಿಸಿಕೊಂಡ ಕೊಕೇನ್

ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಕೆಲ್ವಿನ್ ಇಡಿಕೊ ಒಕೊರೋ ಬಂಧಿತ ಆರೋಪಿ. ಈತ ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಕೊಕೈನ್ ಮಾರಾಟ ಮಾಡುತ್ತಿದ್ದ.

ಆರೋಪಿಯಿಂದ 4 ಲಕ್ಷ ರೂ ಮೌಲ್ಯದ ಕೊಕೈನ್, ಮೂರು ಮೊಬೈಲ್ ಹಾಗೂ ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ. ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖಎ ನಡೆಯುತ್ತಿದೆ.

ABOUT THE AUTHOR

...view details