ಬೆಂಗಳೂರು :ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದು ಮಾದಕ ದಂಧೆ ಆರಂಭಿಸಿದ್ದ ಆರೋಪಿಯನ್ನ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಬಂಧಿಸಿದೆ. ನೈಜೀರಿಯಾ ಮೂಲದ ಕ್ಲಿಂಟನ್ ಕೋಸಿ ಇಫೆಜಿಕಾ ಬಂಧಿತ ಆರೋಪಿ.
ಸುಲಭವಾಗಿ ಹಣ ಗಳಿಸಲು ಮಾದಕ ಪದಾರ್ಥ ಮಾರಾಟದ ಹಾದಿ ಹಿಡಿದಿದ್ದ ಆರೋಪಿ ದೆಹಲಿಯಲ್ಲಿರುವ ನೈಜೀರಿಯಾ ಮೂಲದ ವ್ಯಕ್ತಿಯಿಂದ ವಿವಿಧ ಮಾದಕ ಪದಾರ್ಥಗಳನ್ನ ಖರೀದಿಸಿ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ. ಹೀಗೆ ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯೊಳಗೆ ದಂಧೆಯಲ್ಲಿ ನಿರತನಾಗಿದ್ದಾಗ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.