ಬೆಂಗಳೂರು : ಪೊಲೀಸರನ್ನು ಯಾಮಾರಿಸಲು ತಂತ್ರಜ್ಞಾನವನ್ನ ಬಳಸಿಕೊಂಡು ಮಾದಕವಸ್ತು ಪೂರೈಕೆಯಲ್ಲಿ ತೊಡಗಿದ್ದ ನೈಜೀರಿಯಾ ಮೂಲದ ಆರೋಪಿಯನ್ನು ಕೆ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನೆಲ್ಸನ್ ಎಂದು ಗುರುತಿಸಲಾಗಿದೆ. ಆರೋಪಿಯು ಇಂಜಿನಿಯರಿಂಗ್, ವೈದ್ಯಕೀಯ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ವಿದೇಶಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಆನ್‌ಲೈನ್ ಮೂಲಕವೇ ವ್ಯವಹರಿಸುತ್ತಿದ್ದ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಬಂಧನ - ಮಾದಕವಸ್ತು ಪೂರೈಕೆ ಮಾಡುತ್ತಿದ್ದ ನೈಜೀರಿಯಾ ಮೂಲದ ಆರೋಪಿ ಬಂಧನ
ಇಂಟರ್ನೆಟ್ ಕಾಲ್, ವಾಟ್ಸ್ಆ್ಯಪ್ ಕಾಲ್ ಮೂಲಕ ಗ್ರಾಹಕರಿಗೆ ಮಾದಕವಸ್ತು ಪೂರೈಕೆ ಮಾಡುತ್ತಿದ್ದ ನೈಜೀರಿಯಾ ಮೂಲದ ಆರೋಪಿಯನ್ನು ಕೆಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನೆಲ್ಸನ್ ಎಂದು ಗುರುತಿಸಲಾಗಿದೆ.
![ಆನ್‌ಲೈನ್ ಮೂಲಕವೇ ವ್ಯವಹರಿಸುತ್ತಿದ್ದ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಬಂಧನ nigeria based drug peddler arrested in Bengaluru](https://etvbharatimages.akamaized.net/etvbharat/prod-images/768-512-14643667-895-14643667-1646461682061.jpg)
ಆನ್‌ಲೈನ್ ಮೂಲಕವೇ ವ್ಯವಹರಿಸುತ್ತಿದ್ದ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಬಂಧನ
ಇಂಟರ್ನೆಟ್ ಕಾಲ್, ವಾಟ್ಸಾಪ್ ಕಾಲ್ ಮೂಲಕ ಗ್ರಾಹಕರ ಜೊತೆ ಮಾತನಾಡುತ್ತಿದ್ದ ಆರೋಪಿ ನೆಲ್ಸನ್ ಆನ್‌ಲೈನ್ ಮೂಲಕ ಹಣ ಪಡೆಯುತ್ತಿದ್ದ. ಬಳಿಕ ನಿರ್ಜನ ಪ್ರದೇಶದಲ್ಲಿರುವ ಪೊದೆ, ಮರ-ಗಿಡಗಳ ಬಳಿ ಡ್ರಗ್ಸ್ ತಂದಿಟ್ಟು ಫೋಟೋ ಮತ್ತು ಲೊಕೇಷನ್ ಅನ್ನು ಗ್ರಾಹಕರಿಗೆ ಕಳುಹಿಸುತ್ತಿದ್ದ. ಸದ್ಯ ಆರೋಪಿಯನ್ನು ಕೆ.ಜಿ ಹಳ್ಳಿ ಠಾಣಾ ಇನ್ಸ್ಪೆಕ್ಟರ್ ಸಂತೋಷ್ ನೇತೃತ್ವದ ತಂಡ ಬಂಧಿಸಿದ್ದು, ಬರೋಬ್ಬರಿ 25 ಲಕ್ಷ ರೂ ಮೌಲ್ಯದ ಎಂಡಿಎಂಎ ಮಾತ್ರೆಗಳನ್ನು ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.
ಓದಿ :ದರೋಡೆಗೆ ಸಂಚು ಹೂಡಿದ್ದವರ ಮೇಲೆ ಪೊಲೀಸ್ ದಾಳಿ: ಅಪ್ರಾಪ್ತರು ಸೇರಿ ಐವರ ಬಂಧನ
TAGGED:
drug peddler arrested