ಬೆಂಗಳೂರು:ನಿಷೇಧಿತ ಐಸಿಸ್ ಸಂಘಟನೆ ಸೇರಿದಂತೆ ವಿವಿಧ ಉಗ್ರ ಸಂಘಟನೆಗಳೊಂದಿಗೆ ನಂಟು ಬೆಳೆಸಿಕೊಂಡಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ತಂಡ (ಎಎನ್ಐ) ಬಂಧಿಸಿದೆ. ಮೊಹಮ್ಮದ್ ತಾಕಿರ್(33) ಬಂಧಿತ ಆರೋಪಿಯಾಗಿದ್ದಾನೆ.
ಬೆಂಗಳೂರು ಮೂಲದ ತಾಕಿರ್ ದೇಶದಲ್ಲಿ ಭಯೋತ್ಪಾದನೆ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದನಂತೆ. ಐಸಿಸ್ ಸೇರಿದಂತೆ ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳಿಗೆ ಸೇರಲು ಭಾರತೀಯ ಯುವಕರನ್ನ ಪ್ರಚೋದಿಸುತ್ತಿದ್ದನು ಎಂಬ ಮಾಹಿತಿ ಲಭ್ಯವಾಗಿದೆ. 2013ರಲ್ಲಿ ತನ್ನ ಸಹಚರರೊಂದಿಗೆ ತಾಕಿರ್ ಸಿರಿಯಾಗೆ ಭೇಟಿ ನೀಡಿದ್ದನಂತೆ. ಭಾರತೀಯ ಮುಸ್ಲೀಂಮರಿಂದ ಸಹಕಾರದ ಬಗ್ಗೆಯೂ ಮಾತುಕತೆ ನಡೆಸಿದ್ದ ಎಂದು ಹೇಳಲಾಗಿದೆ. ನಿಷೇಧಿತ ಸಂಘಟನೆಗಳಾದ ಐಸಿಸ್, ಐಎಸ್ ಐಎಲ್ ಹಾಗೂ ದಹೇಶ್ ಜೊತೆ ನಿರಂತರ ಸಂಪರ್ಕ ಹೊಂದಿರುವ ಮಾಹಿತಿ ಲಭ್ಯವಾಗಿದೆ.