ಕರ್ನಾಟಕ

karnataka

ವೈಫಲ್ಯ ಕಂಡಿದ್ದ ಬಿಬಿಎಂಪಿ 'ಸಹಾಯ' ಆ್ಯಪ್​ಗೆ ಮರುಶಕ್ತಿ... ಈಡೇರುತ್ತಾ ಎನ್​ಜಿಒಗಳ ಕನಸು?

By

Published : Sep 30, 2019, 12:37 PM IST

ವೈಫಲ್ಯ ಕಂಡಿದ್ದ ಬಿಬಿಎಂಪಿ 'ಸಹಾಯ' ಆ್ಯಪ್​ಗೆ ಮರುಶಕ್ತಿ ನೀಡುವ ಸಲುವಾಗಿ, ಲೆಟ್ಸ್ ಬಿ ದ ಚೇಂಜ್ ಎಂಬ ಸಂಸ್ಥೆಯೊಂದು 150 ಎನ್​ಜಿಒಗಳ ಜೊತೆ ಸೇರಿ ಬಿಬಿಎಂಪಿ ಜೊತೆಗೆ ಕೈಜೋಡಿಸಿದೆ. ಈ ನಿಟ್ಟಿನಲ್ಲಿ 'ಬೆಂಗಳೂರು ವೀರರು' ಎಂಬ ವೇದಿಕೆಗೆ ಗಾಂಧಿ ಜಯಂತಿಯಂದು ಚಾಲನೆ ಸಿಗಲಿದೆ.

ವೈಫಲ್ಯ ಕಂಡಿದ್ದ ಬಿಬಿಎಂಪಿ 'ಸಹಾಯ' ಆ್ಯಪ್​ಗೆ ಮರುಶಕ್ತಿ

ಬೆಂಗಳೂರು:ನಗರದ ಸಾರ್ವಜನಿಕರ ಕಸದ ಸಮಸ್ಯೆ, ರಸ್ತೆಗುಂಡಿ ಸಮಸ್ಯೆ ಸೇರಿದಂತೆ ನಾನಾ ಮೂಲಸೌಕರ್ಯ ಸಮಸ್ಯೆಗಳನ್ನು ಬಿಬಿಎಂಪಿ ಗಮನಕ್ಕೆ ತರುವ ನಿಟ್ಟಿನಲ್ಲಿ 'ಸಹಾಯ' ಆ್ಯಪ್ ಅನ್ನು ಪರಿಚಯಿಸಲಾಗಿತ್ತು. ಆದ್ರೆ ಸಾಗರೋಪಾದಿಯಲ್ಲಿ ಸಮಸ್ಯೆಗಳು ದಾಖಲಾದ್ರೂ, ಒಂದೂ ಪರಿಹಾರ ಕಾಣದೆ ಜನರೇ ಬೇಸತ್ತು ಹೋಗಿದ್ದರು.

ವೈಫಲ್ಯ ಕಂಡಿದ್ದ ಬಿಬಿಎಂಪಿ 'ಸಹಾಯ' ಆ್ಯಪ್​ಗೆ ಮರುಶಕ್ತಿ

ಇದೀಗ ನಗರದ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಲೆಟ್ಸ್ ಬಿ ದ ಚೇಂಜ್ ಎಂಬ ಸಂಸ್ಥೆಯೊಂದು ಬಿಬಿಎಂಪಿ ಜೊತೆಗೆ ಸೇರಿ 'ಬೆಂಗಳೂರು ವೀರರು' ಎಂಬ ವೇದಿಕೆಗೆ ಗಾಂಧಿ ಜಯಂತಿಯಂದು ಚಾಲನೆ ನೀಡಲಿದ್ದಾರೆ. ಈ ವೇದಿಕೆಗೆ ನಗರದ 150 ಎನ್​ಜಿಒಗಳು ಕೈ ಜೋಡಿಸಿವೆ. ಹೀಗಾಗಿ ಬಿಬಿಎಂಪಿಯು ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ 'ಸಹಾಯ' ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಜನರು ಹಾಗೂ ಪಾಲಿಕೆಯ ನಡುವಿನ ಕೊಂಡಿಯಾಗಿ ಈ ಎನ್​ಜಿಒಗಳು ಕೆಲಸ ಮಾಡಲಿವೆ.

ಸಾರ್ವಜನಿಕರು ವಿವಿಧ ಸಹಾಯವಾಣಿಗಳಿಗೆ ದಾಖಲಿಸುವ ದೂರುಗಳನ್ನು ಈ ವೇದಿಕೆ ನಿಭಾಯಿಸಲಿದ್ದು, ಸಾರ್ವಜನಿಕರಿಗೆ ವಿವಿಧ ಇಲಾಖೆಗಳಿಂದ ಬೇಕಾಗುವ ಸಹಾಯವನ್ನು ನೀಡಲಿದೆ. ಇನ್ನಾದ್ರೂ ಪಾಲಿಕೆ ಅಧಿಕಾರಿಗಳು ನಗರದ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಕೆಲಸ ನಿರ್ವಹಿಸಲಿದ್ದಾರಾ ಎಂದು ಕಾದು ನೋಡಬೇಕಿದೆ.

ABOUT THE AUTHOR

...view details