ಕರ್ನಾಟಕ

karnataka

ETV Bharat / city

ಹೆಣ್ಣು ಮಗುವೆಂದು ದುರ್ಗಮ್ಮ ಗುಡಿ ಮುಂದೆ ನವಜಾತ ಶಿಶು ಬಿಟ್ಟು ಹೋದ ಪಾಪಿಗಳು - ವಿಜಯಪುರ ಸರ್ಕಾರಿ ಆಸ್ಪತ್ರೆ

ಆಗತಾನೆ ಹುಟ್ಟಿದ ನವಜಾತ ಹೆಣ್ಣು ಶಿಶುವನ್ನು ದೇವಾಲಯದ ಮುಂದೆ ಇಟ್ಟು ತಾಯಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ- ಚಿಕ್ಕಬಳ್ಳಾಪುರ ರಸ್ತೆಯ ಕೆರೆಯ ಮೇಲಿರುವ ದುರ್ಗಮ್ಮ ಗುಡಿ ಬಳಿ ಕಂಡು ಬಂದಿದೆ.

ನವಜಾತ ಶಿಶು, newly born baby girl
ನವಜಾತ ಶಿಶು

By

Published : Nov 25, 2021, 10:41 AM IST

ದೇವನಹಳ್ಳಿ: ಹೆಣ್ಣು ಮಗು ಎಂಬ ಕಾರಣಕ್ಕೆ ಆಗತಾನೆ ಹುಟ್ಟಿದ ನವಜಾತ ಶಿಶುವನ್ನು ದೇವಿಗೆ ಅರ್ಪಿಸುವ ರೀತಿ ದೇವಾಲಯದ ಮುಂದೆ ಇಟ್ಟು ತಾಯಿ ಪರಾರಿಯಾಗಿರುವ ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ - ಚಿಕ್ಕಬಳ್ಳಾಪುರ ರಸ್ತೆಯ ಕೆರೆಯ ಮೇಲಿರುವ ದುರ್ಗಮ್ಮ ಗುಡಿ ಬಳಿ ರಾತ್ರಿಯಷ್ಟೇ ಹುಟ್ಟಿದ ನವಜಾತ ಹೆಣ್ಣು ಶಿಶುವನ್ನು ದೇವರ ಮುಂದೆ ಸಮರ್ಪಿಸುಂತೆ ಬುಟ್ಟಿಯಲ್ಲಿ ಸುತ್ತಿ ದೇವಿಯ ಮುಂದೆ ಇಟ್ಟು ಹೋಗಿದ್ದಾರೆ. ಶಿಶು ಅಳುತ್ತಿದ್ದ ಧ್ವನಿ ಕೇಳಿ ಗುಡಿ ಬಳಿಗೆ ಬಂದ ಕೃಷ್ಣಮೂರ್ತಿ ಎನ್ನುವರ ಮಗು ರಕ್ಷಣೆ ಮಾಡಿ ವಿಜಯಪುರ ಸರ್ಕಾರಿ ಆಸ್ಪತ್ರೆಗೆ ನೀಡಿದ್ದಾರೆ.

ದುರ್ಗಮ್ಮ ಗುಡಿ ಮುಂದೆ ನವಜಾತ ಶಿಶು ಬಿಟ್ಟು ಹೋದ ತಾಯಿ

ಹೆಣ್ಣು ಎಂಬ ಕಾರಣಕ್ಕೆ ಅಥವಾ ಅನೈತಿಕ ಸಂಬಂಧಕ್ಕೆ ಹುಟ್ಟಿದ ಮಗುವೆಂದು ಹೆದರಿ ಗುಡಿಯ ಮುಂಭಾಗದಲ್ಲಿ ಬಿಟ್ಟು ಹೋಗಿದ್ದಾರೆ ಎಂಬ ಸಂಶಯ ವ್ಯಕ್ತವಾಗುತ್ತಿದೆ. ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ABOUT THE AUTHOR

...view details